ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019ರಿಂದ 23ರವರೆಗಿನ ಜುಲೈ ಆವೃತ್ತಿಗಳಲ್ಲಿ ಪ್ರಥಮ / ದ್ವಿತೀಯ ಸಾಲಿಗೆ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳು ದ್ವಿತೀಯ ಹಾಗೂ ತೃತೀಯ ಕೋರ್ಸ್ ಗಳಿಗೆ+ ಬೋಧನಾ ಶುಲ್ಕವನ್ನು ದಂಡ ಶುಲ್ಕವಿಲ್ಲದೇ ಪಾವತಿಸುವ ಅವಕಾಶವನ್ನು ಡಿ.15ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ ಹಾಗೂ ಅಂತಿಮ ಎಂಎ (ಎಂಸಿಜೆ), ಎಂಕಾಂ, ಎಂಬಿಎ, ಎಂಎಸ್ಸಿ ವಿದ್ಯಾರ್ಥಿಗಳು ನಿಗದಿತ ಕಾಲಾವಧಿಯಲ್ಲಿ ಬೋಧನಾ ಶುಲ್ಕ ಪಾವತಿಸಬೇಕು. ವಿದ್ಯಾರ್ಥಿಗಳು 400 ರೂ. ದಂಡ ಶುಲ್ಕದೊಂದಿಗೆ ಪಾವತಿಸಲು ಡಿ. 31 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ತಾವೇ ಬೋಧನಾ ಶುಲ್ಕವನ್ನು ಪಾವತಿಸಿ, ಶುಲ್ಕ ಪಾವತಿಸಿದ ರಶೀದಿ ಮತ್ತು ಅರ್ಜಿಯನ್ನು 15 ದಿನಗಳ ಒಳಗಾಗಿ ಪ್ರವೇಶಾತಿ ಪಡೆದ ಪ್ರಾದೇಶಿಕ ಕೇಂದ್ರಕ್ಕೆ ತಾವೇ ಭೇಟಿ ನೀಡಿ ಗುರುತಿನ ಚೀಟಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.