alex Certify ಗಮನಿಸಿ : ‘ಗೃಹ ಜ್ಯೋತಿ’ ಯೋಜನೆ ಪೂರ್ವದ ಬಾಕಿ ವಿದ್ಯುತ್ ಶುಲ್ಕ ಪಾವತಿಸಲು ಸೆ. 30 ಕೊನೆ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ‘ಗೃಹ ಜ್ಯೋತಿ’ ಯೋಜನೆ ಪೂರ್ವದ ಬಾಕಿ ವಿದ್ಯುತ್ ಶುಲ್ಕ ಪಾವತಿಸಲು ಸೆ. 30 ಕೊನೆ ದಿನ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಮಡಿಕೇರಿ ವಿಭಾಗ ವ್ಯಾಪ್ತಿಯ ಗೃಹ ವಿದ್ಯುತ್ ಬಳಕೆ ಗ್ರಾಹಕರಿಗೆ ಸಂಬಂಧಿಸಿದಂತೆ ಗೃಹ ಜ್ಯೋತಿ ಯೋಜನೆ ಪೂರ್ವದ ವಿದ್ಯುತ್ ಬಾಕಿ ಶುಲ್ಕ ಪಾವತಿಸಲು ಸೆಪ್ಟಂಬರ್, 30 ಕಡೆಯ ದಿನವಾಗಿದೆ ಎಂದು ಸೆಸ್ಕ್ ನ ಪ್ರಕಟಣೆ ತಿಳಿಸಿದೆ.

ಬಾಕಿ ಶುಲ್ಕ ಪಾವತಿಗೆ ಈಗಾಗಲೇ ಸೆಪ್ಟಂಬರ್, 30 ರ ಗಡುವು ನೀಡಲಾಗಿತ್ತು. ಅದರಂತೆ ಹಲವು ಗ್ರಾಹಕರು ಬಾಕಿ ಶುಲ್ಕ ಪಾವತಿಸಿದ್ದಾರೆ. ಬಾಕಿ ಪಾವತಿಸದ ಗ್ರಾಹಕರಿಗೆ ಕೊನೆಯ 4 ದಿನಗಳ ಕಾಲಾವಕಾಶವಿದೆ.

ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೇ ಅಕ್ಟೋಬರ್, 01 ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...