ಬೆಂಗಳೂರು : ಬೇಸಿಗೆಯ ಹವಾಮಾನ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಸೂರ್ಯನ ತಾಪಮಾನ ಹೆಚ್ಚು ಇರುವುದರಿಂದ, ಗಾಳಿಯಲ್ಲಿನ ಮಾಲಿನ್ಯಕರ ಅಂಶವು ಮಕ್ಕಳಲ್ಲಿ ಆಯಾಸ, ಚರ್ಮದ ರೋಗ, ಬೆವರು ಸಾಲೆ, ನಿರ್ಜಲೀಕರಣ, ಉದರ ಸಮಸ್ಯೆ, ತಲೆ ನೋವು, ತಲೆ ಸುತ್ತುವ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ. ಆದ್ದರಿಂದ ಅವರ ಜೀವಶೈಲಿಯತ್ತ ವಿಶೇಷ ಗಮನ ಹರಿಸಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
• ದೇಹಕ್ಕೆ ಚೈತನ್ಯ ನೀಡುವ ಹಣ್ಣಿನ ರಸ, ನಿಂಬೆ ಪಾನಕ, ಎಳನೀರು ಮಕ್ಕಳಿಗೆ ಕುಡಿಸುವುದು ಒಳ್ಳೆಯದು.
• ಮಕ್ಕಳಿಗೆ ಕುಡಿಯಲು ಕುದಿಸಿ ಆರಿಸಿದ ನೀರನ್ನು ನೀಡಬೇಕು.
• ಬಿಸಿಯಾದ ಆಹಾರ ಪದಾರ್ಥವನ್ನು ಮಕ್ಕಳಿಗೆ ನೀಡುವುದು ಸೂಕ್ತ.
• ಬೇಸಿಗೆ ಕಾಲದಲ್ಲಿ ಸಿಡುಬಿನ ಸಾಧ್ಯತೆ ಹೆಚ್ಚು. ಮಗುವಿನಲ್ಲಿ ಜ್ವರ, ಶೀತ, ತಲೆನೋವು, ಬೊಕ್ಕೆಗಳು ಕಾಣಿಸಿಕೊಂಡಲ್ಲಿ ನುರಿತ ವೈದ್ಯರನ್ನು ಸಂಪರ್ಕಿಸಬೇಕು.
ಮಕ್ಕಳ ಆರೋಗ್ಯದ ಮೇಲೆ ಬೇಸಿಗೆಯ ಹವಾಮಾನ ಪರಿಣಾಮ ಬೀರದಂತೆ ಜಾಗೃತಿ ವಹಿಸಿ.