alex Certify ಪೋಷಕರೇ ಗಮನಿಸಿ : ನಾಳೆಯಿಂದ ಶಾಲೆಗೆ ಹೋಗಲು ಮಕ್ಕಳು ಅತ್ತರೆ..ಹೀಗೆ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಗಮನಿಸಿ : ನಾಳೆಯಿಂದ ಶಾಲೆಗೆ ಹೋಗಲು ಮಕ್ಕಳು ಅತ್ತರೆ..ಹೀಗೆ ಮಾಡಿ..!

ಬೆಂಗಳೂರು : 2024 -25 ನೇ ಸಾಲಿನ ಶೈಕ್ಷಣಿಕ ಅವಧಿ ನಾಳೆಯಿಂದ ಆರಂಭವಾಗಲಿದೆ. ಇಷ್ಟು ದಿನ ಬೇಸಿಗೆ ರಜೆಯ ಮಜ ಅನುಭವಿಸಿದ್ದ ಮಕ್ಕಳು ನಾಳೆ ಶಾಲೆಗೆ ಹೋಗಲು ಹಠ ಹಿಡಿಯಬಹುದು, ನಾಳೆಯಿಂದ ಶಾಲೆಗೆ ಕಳುಹಿಸುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ.

ಮಕ್ಕಳು ಶಾಲೆಗೆ ಹೋಗಲು ಗಲಾಟೆ ಮಾಡಿದ್ರೆ ಹೀಗೆ ಮಾಡಿ

1) ಮಕ್ಕಳಿಗೆ ಹೊಸ ಬಟ್ಟೆ , ಶೂ, ಬ್ಯಾಗ್ , ಛತ್ರಿ ಕೊಡಿಸಿ..ಇದರಿಂದ ಮಕ್ಕಳು ಶಾಲೆಗೆ ಬಹಳ ಖುಷಿಯಿಂದ ಹೋಗುತ್ತಾರೆ.
2) ಶಾಲೆಯ ಹೆಸರು ಕೇಳಿದ ತಕ್ಷಣ ಮಕ್ಕಳಿಗೆ ಭಯ ಶುರುವಾಗುತ್ತದೆ. ನೀವು ಅವರನ್ನು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧಪಡಿಸಬೇಕು. ಶಾಲೆಯ ಬಗ್ಗೆ ಇರುವ ಭಯವನ್ನು ಮೊದಲು ತೆಗೆದು ಹಾಕಿ.
3) ನಿಮ್ಮ ಮಗುವಿಗೆ ಊಟದ ಬಾಕ್ಸ್ ನಲ್ಲಿ ಅವರ ಇಷ್ಟದ ಆಹಾರವನ್ನು ನೀಡಬೇಕು. ಇದರಿಂದ ಅವರ ಮನಸ್ಸಿಗೆ ಸಂತೋಷವಾಗುತ್ತದೆ.
4) ಮಕ್ಕಳನ್ನು ಒತ್ತಾಯಪೂರ್ವಕವಾಗಿ ಏಳಿಸ್ಬೇಡಿ, ಚಿಕ್ಕಮಕ್ಕಳಾದ್ರೆ ಹೆಚ್ಚಿನ ನಿದ್ರೆ ಅಗತ್ಯ, ಆದ್ದರಿಂದ ಬೆಳಗ್ಗೆ ಹೆಚ್ಚು ಹೊತ್ತು ನಿದ್ದೆ ಮಾಡಲು ಬಿಡಿ.
5) ಮಗು ಶಾಲೆಗೆ ಹೋಗಲು ಅಳ್ತಿದ್ರೆ ಬೈಯಬೇಡಿ, ಹೊಡೆಯಬೇಡಿ. ಮೊದಲ ದಿನ ಮಗುವಿಗೆ ಚಾಕೊಲೇಟ್ ಅಥವಾ ಐಸ್ ಕ್ರೀಮ್ ಕೊಟ್ಟು ಖುಷಿಯಿಂದ ಕಳುಹಿಸಿಕೊಡಿ.

ಈ ಬಾರಿ ಶಾಲೆಗೆ ಮಕ್ಕಳು ಬರುತ್ತಿದ್ದಂತೆ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಹಾಗೂ ನಾಳೆಯಿಂದಲೇ ಮಕ್ಕಳಿಗೆ ಕ್ಷೀರಭಾಗ್ಯ, ಬಿಸಿಯೂಟ ನೀಡಲು ಆದೇಶ ಹೊರಡಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...