ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿ ನಾಲ್ಕು ತಿಂಗಳು ಕಳೆದಿದ್ದು, ಈಗಾಗಲೇ ಮೂರು ಕಂತಿನ ಹಣವು ಕೂಡ ವರ್ಗಾವಣೆ ಆಗಿದೆ. ಆದರೆ ಕೆಲವರಿಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ. ಅಗಸ್ಟ್ 15ನೇ ತಾರೀಖಿನ ಮೊದಲು ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೋ ಅಂತವರ ಖಾತೆಗೆ 6,000 ಹಣ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನೀವು ಅಗಸ್ಟ್ 15ಕ್ಕಿಂತ ಮೊದಲು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ್ರೆ ತಕ್ಷಣ ಈ ಕೆಲಸ ಮಾಡಿ..
ನೀವು ಅಗಸ್ಟ್ 15ಕ್ಕಿಂತ ಮೊದಲು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿ ಹಣ ಬಂದಿಲ್ಲ ಅಂದರೆ ದೂರು ಸಲ್ಲಿಸುವ ಸಲುವಾಗಿ ಗೃಹಲಕ್ಷ್ಮಿ ಅದಾಲತ್ ಆರಂಭಿಸಿದೆ. ಇದರಿಂದಾಗಿ ನೀವು ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದನ್ನು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ತಿಳಿಸಬೇಕು . ಅವರು ತಕ್ಷಣವೇ ನಿಮ್ಮ ಖಾತೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸಲಿದ್ದಾರೆ. ಗೃಹಲಕ್ಷ್ಮಿ ಹಣ ಬಾರದೆ ಇರುವ ಮಹಿಳೆಯರನ್ನ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ.
ಡಿಸೆಂಬರ್ ಅಂತ್ಯದ ಒಳಗೆ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ 2,000 ತಲುಪುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.