ಬೆಂಗಳೂರು : ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ ಸಿ ಎಲ್ ಪ್ರಕಟಣೆ ಹೊರಡಿಸಿದೆ.
ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ಮುಂದುವರಿಸಲು, ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ.
ಈ ಕೆಳಗಿನ ವಿವರಗಳಂತೆ, ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
1. ದಿನಾಂಕ 20, 23, 30ನೇ ಆಗಸ್ಟ್ 2024 ಹಾಗೂ 6 ಮತ್ತು 11ನೇ ಸೆಪ್ಟೆಂಬರ್ 2024 ರಂದು ಪೂರ್ಣ ದಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರೀ ಕಡೆಗೆ:
1. ದಿನಾಂಕ 24ನೇ ಆಗಸ್ಟ್ 2024 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಪ್ರಾರಂಭವಾಗಲಿದೆ.
2. ದಿನಾಂಕ 25ನೇ ಆಗಸ್ಟ್ 2024 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಪ್ರಾರಂಭವಾಗಲಿದೆ.
ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ:
1. ದಿನಾಂಕ 24ನೇ ಆಗಸ್ಟ್ 2024 ರಂದು ಕೊನೆಯ ರೈಲು ಸೇವೆಯು ರಾತ್ರಿ 11.12 ಕ್ಕೆ ಪ್ರಾರಂಭವಾಗಲಿದೆ.
2. ದಿನಾಂಕ 25ನೇ ಆಗಸ್ಟ್ 2024 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ, 05.00ಕ್ಕೆ ಪ್ರಾರಂಭವಾಗಲಿದೆ.
ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ.