alex Certify ಗಮನಿಸಿ : ಇಂದಿನಿಂದ ಮೈಸೂರು ‘ಯುವ ದಸರಾ’ ವೀಕ್ಷಣೆಗೆ ಆನ್ ಲೈನ್ ನಲ್ಲಿ ಟಿಕೆಟ್ ಲಭ್ಯ , ಜಸ್ಟ್ ಹೀಗೆ ಬುಕ್ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಇಂದಿನಿಂದ ಮೈಸೂರು ‘ಯುವ ದಸರಾ’ ವೀಕ್ಷಣೆಗೆ ಆನ್ ಲೈನ್ ನಲ್ಲಿ ಟಿಕೆಟ್ ಲಭ್ಯ , ಜಸ್ಟ್ ಹೀಗೆ ಬುಕ್ ಮಾಡಿ..!

ಮೈಸೂರು : ಈ ಬಾರಿ ಮೈಸೂರು ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ‘ಯುವ ದಸರಾ’ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್ಗಳ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅ.6ರಿಂದ 10ರವರೆಗೆ ನಿತ್ಯ ಸಂಜೆ 6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಅ.6ರಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಉದ್ಘಾಟಿಸಲಿದ್ದಾರೆ.

‘ಟಿಕೆಟ್ಗಳನ್ನು ಸೆ.27ರಿಂದ ಆನ್ಲೈನ್ನಲ್ಲಿ ದಸರಾದ ಅಧಿಕೃತ ಜಾಲತಾಣವಾದ https://www.mysoredasara.gov.in/ ಹಾಗೂ Book My Show ಮೂಲಕ ಖರೀದಿಸಬಹುದು. ವೀಕ್ಷಕರ ಗ್ಯಾಲರಿ–1 (ವೇದಿಕೆ ಸಮೀಪ) ಟಿಕೆಟ್ ಮುಖಬೆಲೆ ₹8 ಸಾವಿರ ಹಾಗೂ ವೀಕ್ಷಕರ ಗ್ಯಾಲರಿ–2ರ ಟಿಕೆಟ್ಗಳ ಮುಖಬೆಲೆ ₹5 ಸಾವಿರ ನಿಗದಿಪಡಿಸಲಾಗಿದೆ. ಒಂದು ಟಿಕೆಟ್ನಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ಮಾತ್ರ ಪ್ರವೇಶ (ನಿಗದಿತ ಗ್ಯಾಲರಿಯಲ್ಲಿ) ಅವಕಾಶವಿರುತ್ತದೆ’ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...