ಬೆಂಗಳೂರು : ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024 ಸಂಬಂಧಿಸಿದಂತೆ, ನ.23ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.09 ರವರೆಗೆ ಅವಕಾಶ ಕಲ್ಪಿಸಲಾಗಿದೆ .
ಚುನಾವಣಾ ಆಯೋಗ ನಿಗಧಿಪಡಿಸಿದಂತೆ, 2020ರ ನ.01 ಕ್ಕಿಂತ ಮುಂಚಿತವಾಗಿ ಪದವೀಧರರು ಆಗಿರಬೇಕು, ಆದರೆ ಈ ತಿರಸ್ಕ್ರತ ಪ್ರಕರಣಗಳಲ್ಲಿ 2020ರ ನ.01 ನಂತರ ಪದವಿ ಪೂರ್ಣಗೊಳಿಸಿದ ಕಾರಣ ಮತ್ತು ಆಯೋಗ ನಿಗದಿಪಡಿಸಿದ ವಿದ್ಯಾರ್ಹತೆ ಇಲ್ಲದೇ ಇರುವುದರಿಂದ ತಿರಸ್ಕರಿಸಲಾಗಿದೆ.
ಡಿ.12ರವರೆಗೆ ಮತದಾರರು ತಮ್ಮ ಹೆಸರು ನೋಂದಣಿಗೆ ಅವಕಾಶ ಮತ್ತು ಹೆಸರು, ವಿಳಾಸ ಸೇರಿದಂತೆ ಯಾವುದೇ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ನಾಲ್ಕು ಶಿಕ್ಷಕರ ಕ್ಷೇತ್ರದಲ್ಲಿ 61,643 ಮತದಾರರಿದ್ದು, ಮೂರು ಪದವೀಧರ ಕ್ಷೇತ್ರದಲ್ಲಿ 2,73,776 ಮತದಾರರಿದ್ದಾರೆ. ಒಟ್ಟು 3,35,419 ಮತದಾರರು ನೋಂದಣಿಯಾಗಿದ್ದಾರೆ.
ಡಿ.9ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಡಿ.25ರಂದು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಡಿ.30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಅರ್ಜಿದಾರರು, ಈ ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಇದೇ ನ.23 ರಿಂದ ಡಿ.09 ರವರೆಗೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತದಾರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಡಿ.30 ರಂದು ಪ್ರಕಟಿಸಲಾಗುತ್ತದೆ.