ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960ರ ಪ್ರಕಾರ, ನೋಂದಾಯಿತ ಸಂಘ-ಸಂಸ್ಥೆಗಳು ಪ್ರತಿ ವರ್ಷ ತಮ್ಮ ನೋಂದಣಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ. ಆದರೆ, ಅನೇಕ ಸಂಘ-ಸಂಸ್ಥೆಗಳು ಕಳೆದ ಐದು ವರ್ಷಗಳಿಂದ ನವೀಕರಣ ಮಾಡಿಸದೇ ಇರುವುದು ಕಂಡುಬಂದಿದೆ.
ಇಂತಹ ಸಂಘ-ಸಂಸ್ಥೆಗಳಿಗೆ ಸರ್ಕಾರವು ಕೊನೆಯ ಅವಕಾಶವನ್ನು ನೀಡಿದ್ದು, ಡಿಸೆಂಬರ್ 31, 2025ರ ಒಳಗೆ ತಮ್ಮ ನೋಂದಣಿಯನ್ನು ನವೀಕರಿಸಿಕೊಳ್ಳಬಹುದು. ಒಂದು ವೇಳೆ, ಈ ಗಡುವಿನೊಳಗೆ ನವೀಕರಿಸದಿದ್ದರೆ, ಪ್ರತಿ ವರ್ಷಕ್ಕೆ 3 ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಘ-ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.