ಬೆಂಗಳೂರು : ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿರೀಕ್ಷರ ಹುದ್ದೆಗೆ ಕೆಪಿಎಸ್ ಸಿ ( ಕರ್ನಾಟಕ ಲೋಕಸೇವಾ ಆಯೋಗ) ಕೀ ಉತ್ತರ ಪ್ರಕಟಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೆಪಿಎಸ್ ಸಿ ‘ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿರೀಕ್ಷರ 53 ಹುದ್ದೆಗೆ ಡಿ.30 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ ಪರಿಶೀಲನೆ ಮಾಡಬಹುದಾಗಿದೆ.ಅಂಚೆ ಮೂಲಕ ಜ.9 ರೊಳಗಾಗಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಣೆ ಹೊರಡಿಸಿದೆ.