ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ನೋಟು ಯಾರಿಗೆ ಬೇಡ. ಸದಾ ನೋಟಿನ ಕಂತು ಕಂತು ಎಣಿಸುವವರಿಗೂ ನೋಟಿನ ಬಗ್ಗೆ ಹೆಚ್ಚಿನ ಜ್ಞಾನವಿರುವುದಿಲ್ಲ. ನೋಟನ್ನು ಯಾವುದ್ರಿಂದ ತಯಾರಿಸಲಾಗುತ್ತದೆ ಅಂತಾ ಕೇಳಿದ್ರೆ ಬರುವ ಬಹುತೇಕ ಉತ್ತರ ಕಾಗದ. ಆದ್ರೆ ಇದು ತಪ್ಪು. ನೋಟುಗಳನ್ನು ಕಾಗದದಿಂದ ತಯಾರಿಸುವುದಿಲ್ಲ. ಹತ್ತಿಯಿಂದ ತಯಾರಿಸುತ್ತಾರೆ. ಇದಕ್ಕೆ ಕೆಲ ಕಾರಣವಿದೆ.
‘ಮನಿಕೆ ಮಾಗೆ ಹಿತೆ’ಗೆ ಹೊಸ ಟ್ವಿಸ್ಟ್: ವಿಡಿಯೋ ವೈರಲ್
ಕಾಗದದ ನೋಟುಗಳು ದೀರ್ಘಕಾಲ ಬಾಳಿಗೆ ಬರುವುದಿಲ್ಲ. ಹತ್ತಿಯ ನೋಟುಗಳು ಬಾಳಿಕೆ ಬರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ನೋಟಿನಲ್ಲಿ ಶೇಕಡಾ 100 ಹತ್ತಿಯನ್ನು ಬಳಸಲಾಗಿದೆ. ಈ ಕಾರಣದಿಂದಾಗಿ ನೋಟು ದೀರ್ಘಕಾಲ ಬಾಳಿಕೆ ಬರುತ್ತದೆ. ಭಾರತದಲ್ಲಿ ಮಾತ್ರವಲ್ಲ ಕೆಲ ದೇಶಗಳಲ್ಲೂ ಹತ್ತಿಯ ನೋಟು ತಯಾರಿಸಲಾಗುತ್ತದೆ.
BIG NEWS: ಮತದಾರನ ತೀರ್ಪು ಆಡಳಿತ ವಿರೋಧಿ ಅಲೆ ಎನ್ನುವುದು ಮನವರಿಕೆಯಾಗಿದೆ; ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ
ಹತ್ತಿ ನಾರಿನಲ್ಲಿ ಲೆನಿನ್ ಎಂಬ ಫೈಬರ್ ಇರುತ್ತದೆ. ಹತ್ತಿಯ ಜೊತೆಗೆ ಗ್ಯಾಟ್ಲಿನ್ ಮತ್ತು ಹಾಫ್ಸಿವ್ಸ್ ಎಂಬ ದ್ರಾವಣಗಳನ್ನು ಬಳಸಲಾಗುತ್ತದೆ. ಇದು ನೋಟಿನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಭಾರತೀಯ ನೋಟುಗಳು ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಿಂದಾಗಿ ನಕಲಿ ನೋಟು ಪತ್ತೆ ಮಾಡುವುದು ಸುಲಭ.
ಸೆಕ್ಷನ್ 22 ರ ಪ್ರಕಾರ, ರಿಸರ್ವ್ ಬ್ಯಾಂಕ್ ಭಾರತದಲ್ಲಿ ನೋಟುಗಳನ್ನು ವಿತರಿಸುವ ಏಕೈಕ ಅಧಿಕಾರವನ್ನು ಹೊಂದಿದೆ.