ಬೆಂಗಳೂರು : ಸರ್ಕಾರ ಜನರಿಗೆ ಬಿಗ್ ಶಾಕ್ ನೀಡಿದ್ದು, ಆಹಾರ ಇಲಾಖೆಯ ಪರಿಶೀಲನೆಯ ಆಧಾರದ ಮೇರೆಗೆ ಸುಮಾರು 3 ಲಕ್ಷ ಜನರ ಪಡಿತರ ಚೀಟಿ ಅಮಾನತು ಮಾಡಲು ನಿರ್ಧರಿಸಲಾಗಿದೆ.
ಸುಮಾರು 2.96 ಲಕ್ಷ ಹೊಸದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಸಾಕಷ್ಟು ಅನರ್ಹರು ಕೂಡ ಅರ್ಜಿ ಸಲ್ಲಿಸಿದ್ದಾರೆ . ಸರ್ಕಾರ ಜನರಿಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಆಹಾರ ಇಲಾಖೆಯ ಪರಿಶೀಲನೆಯ ಆಧಾರದ ಮೇರೆಗೆ ಸುಮಾರು 3 ಲಕ್ಷ ಜನರ ಪಡಿತರ ಚೀಟಿ ಅಮಾನತು ಮಾಡಲು ನಿರ್ಧರಿಸಲಾಗಿದೆ. ಅವಶ್ಯಕತೆ, ಅರ್ಹತೆ ಇಲ್ಲದವರು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ತಕ್ಷಣವೇ ಅಂಥವರ ರೇಷನ್ ಕಾರ್ಡ್ ರದ್ದು ಪಡಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.ಅಲ್ಲದೇ 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ನ್ನು ಕೂಡ ರದ್ದು ಮಾಡಲು ಚಿಂತನೆ ನಡೆಸಲಾಗಿದೆ.
6 ತಿಂಗಳಿನಿಂದ ಪಡಿತರ ಪಡೆಯದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಒಟ್ಟು 3.26 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಎಂದು ವರದಿಯಾಗಿದೆ.ಒಂದು ವೇಳೆ ಗ್ಯಾರಂಟಿಯ ಯೋಜನೆಯ ಯಾವ ಹಣ ಕೂಡ ಸಿಗಲ್ಲ, ಅನ್ನಭಾಗ್ಯ ಯೋಜನೆ ಅಥವಾ ಗೃಹಲಕ್ಷ್ಮಿ ಯೋಜನೆಯ ಸೇರಿದಂತೆ ಗ್ಯಾರಂಟಿ ಯೋಜನೆಯ ಹಣ ಸಿಗಲ್ಲ.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ವೋ ಈ ರೀತಿ ಚೆಕ್ ಮಾಡಿ
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ವೋ ಅಂತ ಪರಿಶೀಲಿಸಲು ಬಯಸಿದರೆ, ಇದಕ್ಕಾಗಿ, ನೀವು ಅದರ ಅಧಿಕೃತ ವೆಬ್ಸೈಟ್ಗೆ ಹೋಗಬೇಕು nfsa.gov.in/Default.aspx ವೆಬ್ಸೈಟ್ಗೆ ಹೋದ ನಂತರ, ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಬೇಕು.
* ನಂತರ ನೀವು ‘ರಾಜ್ಯ ಪೋರ್ಟಲ್ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ನಂತರ ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ
* ಇದರ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು ಮತ್ತು ನಂತರ ನಿಮ್ಮ ಬ್ಲಾಕ್ ಅನ್ನು ಸಹ ಆಯ್ಕೆ ಮಾಡಬೇಕು
* ನಂತರ ನೀವು ನಿಮ್ಮ ಪಂಚಾಯತ್ ಅನ್ನು ಸಹ ಆಯ್ಕೆ ಮಾಡಬೇಕು
* ಈಗ ನೀವು ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಸಹ ಹೇಳಬೇಕು
ನಂತರ ಒಂದು ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.
* ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿವೆ.
* ಈಗ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಹುಡುಕಬೇಕು.
ನಂತರ ಹುಡುಕಿದ ಹೆಸರು ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಅಂತ ಅರ್ಥ. ಆದರೆ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಅಂತ ಅರ್ಥ.
ರೇಷನ್ ಕಾರ್ಡ್’ ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದೆಯಾ? ಇಲ್ವಾ? ಈ ರೀತಿ ಚೆಕ್ ಮಾಡಿ
ನೀವು ಸಹ ಪಡಿತರ ಚೀಟಿದಾರರಾಗಿದ್ದರೆ ಮತ್ತು ನಿಮ್ಮ ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿ ಸೇರ್ಪಡೆಯಾಗಿದೆಯೇ ಎಂದು ಪರಿಶೀಲಿಸಲು ನೀವು ಬಯಸಿದರೆ
ಇದಕ್ಕಾಗಿ, ನೀವು ಅದರ ಅಧಿಕೃತ ವೆಬ್ಸೈಟ್ಗೆ ಹೋಗಬೇಕು nfsa.gov.in/Default.aspx
ವೆಬ್ಸೈಟ್ಗೆ ಹೋದ ನಂತರ, ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಬೇಕು
* ನಂತರ ನೀವು ‘ರಾಜ್ಯ ಪೋರ್ಟಲ್ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನಂತರ ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ
* ಇದರ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು ಮತ್ತು ನಂತರ ನಿಮ್ಮ ಬ್ಲಾಕ್ ಅನ್ನು ಸಹ ಆಯ್ಕೆ ಮಾಡಬೇಕು.
* ನಂತರ ನೀವು ನಿಮ್ಮ ಪಂಚಾಯತ್ ಅನ್ನು ಸಹ ಆಯ್ಕೆ ಮಾಡಬೇಕು
* ಈಗ ನೀವು ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಸಹ ಹೇಳಬೇಕು
ನಂತರ ಒಂದು ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ
* ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿವೆ
* ಈಗ ನೀವು ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಇಲ್ಲಿ ಹುಡುಕಬೇಕು
* ನಂತರ ಹುಡುಕಿದ ಹೆಸರು ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಅಂತ ಅರ್ಥ. ಆದರೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಯಾಗದಿದ್ದರೆ ಮತ್ತೊಮ್ಮೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.