ಈಗ ಸದ್ಯ ಎಲ್ಲೆಲ್ಲೂ ಮೊಬೈಲ್ ಮೇನಿಯಾ, ಕೈಯಲ್ಲಿ ಮೊಬೈಲ್ ಇಲ್ಲದೇ ಹೋದರೆ ಯಾವ ಕೆಲಸವೂ ಆಗಲ್ಲ. ಆದರೆ ಕೆಲವರು ಮೊಬೈಲ್ ಅನ್ನು ಮನಬಂದಂತೆ ಬಳಸುತ್ತಿದ್ದಾರೆ.ಹೌದು, ಮೊಬೈಲ್ ಸ್ಲೋ ಆದರೆ ಬಹಳ ಕಿರಿಕಿರಿ ಉಂಟಾಗುತ್ತದೆ. ಯಾವುದೇ ತುರ್ತು ಕೆಲಸ ಮಾಡುವಾಗ ಮೊಬೈಲ್ ಸ್ಲೋ ಆದರೆ ಕೆಟ್ಟ ಕೋಪ ಬರುವುದು ಸಹಜ. ಮೊಬೈಲ್ ಸ್ಲೋ ಆಗಲು.. ಕಾರಣವೇನು..? ಇದಕ್ಕೆ ಪರಿಹಾರ ಏನು ತಿಳಿಯಿರಿ.
ಮೆಸೇಜಿಂಗ್ ನಿಂದ ಹಿಡಿದು ಹಣ ವರ್ಗಾವಣೆಯವರೆಗೆ ಎಲ್ಲವನ್ನೂ ಈಗ ಮೊಬೈಲ್ ಫೋನ್ ಗಳೊಂದಿಗೆ ಮಾಡಲಾಗುತ್ತಿದೆ.
* ಫೋನ್ ನಿಧಾನವಾಗಲು ಹಲವಾರು ಕಾರಣಗಳಿವೆ. ಆದರೆ ಇನ್ನೂ ಹೆಚ್ಚಿನ ಅಪ್ಲಿಕೇಶನ್ ಗಳಿವೆ. ಅವುಗಳನ್ನು ಬಳಸದಿದ್ದರೂ ಸಹ, ಅವು ರನ್ ಆಗುತ್ತಲೇ ಇರುತ್ತವೆ ಮತ್ತು ಮೊಬೈಲ್ ಹ್ಯಾಂಗ್ ಆಗುತ್ತದೆ.
ಫೋನ್ ಹೆಚ್ಚು ಹ್ಯಾಂಗ್ ಆದರೆ ಪ್ಲೇಸ್ಟೋರ್ ಹೋಗಿ ಬೇಡವಾದ ಆ್ಯಪ್ ಗಳನ್ನು ಡಿಲೀಟ್ ಮಾಡಿ. ಹೀಗೆ ಮಾಡುವುದರಿಂದ ಬಳಕೆಯಾಗದ ಅಪ್ಲಿಕೇಶನ್ ಗಳು ಆಫ್ ಆಗುತ್ತವೆ. ಇದು ಡೇಟಾ ವ್ಯರ್ಥವಾಗದಂತೆ ನೋಡಿಕೊಳ್ಳುವುದಲ್ಲದೆ ಫೋನ್ ಅನ್ನು ವೇಗವಾಗಿ ಮಾಡುತ್ತದೆ.
*ನಿಮ್ಮ ಮೊಬೈಲ್ ಸ್ಟೋರೇಜ್ ಜಾಸ್ತಿಯಿದೆ ಅಂತಾ ಸಿಕ್ಕಿದ್ದನೆಲ್ಲಾ ಮೊಬೈಲ್ನಲ್ಲಿ ತುಂಬಬೇಡಿ . ನಿಮ್ಮ ಮೊಬೈಲ್ ಸ್ಟೋರೇಜ್ ತುಂಬಿಹೋದರೆ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಶುರುಮಾಡಲಿದೆ.
* ಸ್ಮಾರ್ಟ್ಫೋನ್ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಾಮನ್ಯವಾಗಿ ಸಕ್ರಿಯವಾಗಿರುತ್ತದೆ. ಆದ್ದರಿಂದ ನಿಮ್ಮ ಮೊಬೈಲ್ನಲ್ಲಿ ಆಟೋಸಿಂಕ್ ಆಯ್ಕೆಯನ್ನು ಸ್ಟಾಪ್ ಮಾಡುವುದು ಒಳ್ಳೆಯದು.
*ಹೋಮ್ ಸ್ಕ್ರೀನ್ ತುಂಬಾ ಅಪ್ಲಿಕೇಶನ್ಗಳು ತುಂಬಿಕೊಂಡಿದ್ದರೆ ನಿಮ್ಮ ಮೊಬೈಲ್ ಸ್ಪೀಡ್ ಆಗಿ ಕಾರ್ಯನಿರ್ವಹಿಸುವುದನ್ನು ಕಡಿಮೆ ಮಾಡಲಿದೆ. ಏಕೆಂದರೆ ಹೋಮ್ ಸ್ಕ್ರೀನ್ನಲ್ಲಿ ಬೇರೆ ಬೇರೆ ಅಪ್ಲಿಕೇಶನ್ಗಳು ಏಕಕಾಲದಲ್ಲಿ ಒಪನ್ ಆಗಿದ್ದರೆ ಮೊಬೈಲ್ ಹ್ಯಾಂಗ್ ಆಗುವ ಸಾಧ್ಯತೆ ಇರಲಿದೆ.