
ಮೊದಲ ಬಾರಿಗೆ ಆದಾಯ ತೆರಿಗೆ ಸಲ್ಲಿಸುವ ಸಂದರ್ಭದಲ್ಲಿ ಗೊಂದಲಗಳಾಗುವುದು ಸಹಜ. ಈ ವೇಳೆ ಕೆಲವೊಂದು ತಪ್ಪುಗಳಾಗಬಹುದು, ಇದರಿಂದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಕೂಡ ಬರುತ್ತದೆ. ಹಾಗಾಗಿ ಯಾವ್ಯಾವ ರೀತಿಯ ಪ್ರಮಾದಗಳನ್ನು ತಪ್ಪಿಸಬೇಕು ಎಂಬುದನ್ನು ನೋಡೋಣ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಐಟಿಆರ್ ಸಲ್ಲಿಸುವಾಗ ತಪ್ಪಾದ ವೈಯಕ್ತಿಕ ಮಾಹಿತಿಯನ್ನು ನೀಡಬಾರದು. ನಿಮ್ಮ ಹೆಸರು, ಪ್ಯಾನ್ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಇತ್ಯಾದಿಗಳನ್ನು ಸರಿಯಾಗಿ ಭರ್ತಿ ಮಾಡಿ. ಸರಿಯಾದ ITR ಫೈಲಿಂಗ್ ಫಾರ್ಮ್ ಅನ್ನು ಆಯ್ದುಕೊಳ್ಳುವುದು ಕೂಡ ಅವಶ್ಯಕ. ತಪ್ಪು ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡಲ್ಲಿ ದಂಡ ಕಟ್ಟಬೇಕಾಗಬಹುದು.
ಐಟಿಆರ್ ಸಲ್ಲಿಸುವಾಗ ಸಂಬಳ, ಬಡ್ಡಿ ಆದಾಯ, ದರ ಆದಾಯ, ಬಂಡವಾಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡದಿದ್ದರೆ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಬಹುದು.
ಅಷ್ಟೇ ಅಲ್ಲ ಟಿಡಿಎಸ್ ಕ್ರೆಡಿಟ್ ಅನ್ನು ಸರಿಯಾಗಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಆದಾಯ ತೆರಿಗೆ ನೋಟಿಸ್ ನೀಡುವ ಸಾಧ್ಯತೆ ಇರುತ್ತದೆ. ಉದ್ಯೋಗದಾತರು ನೀಡಿದ ಫಾರ್ಮ್ 16/16A ನಿಂದ TDS ನ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ITR ಅನ್ನು ಫೈಲ್ ಮಾಡಿ.
ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಬೇಕು. ಕೊನೆಯ ದಿನಾಂಕಕ್ಕಾಗಿ ಕಾಯಬೇಡಿ ಮತ್ತು ಸಮಯಕ್ಕೆ ಐಟಿಆರ್ ಅನ್ನು ಸಲ್ಲಿಸಿ. ಗಡುವು ಮುಗಿದ ನಂತರ ತೆರಿಗೆ ಕಟ್ಟಿದಲ್ಲಿ ದಂಡ ಪಾವತಿಸಬೇಕಾಗಬಹುದು. ಕಡಿಮೆ ಆದಾಯವನ್ನು ತೋರಿಸಿದರೂ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಬರಬಹುದು. ಈ ತಪ್ಪನ್ನು ಮಾಡಬೇಡಿ.