2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ (ಮಾರ್ಚ್ 16) ರಂದು ಇಂದು ಪ್ರಕಟಿಸಲಿದೆ. ಸಾಮಾನ್ಯವಾಗಿ ಮತದಾರರ ಗುರುತಿನ ಚೀಟಿ ( ವೋಟರ್ ಐಡಿ) ಭಾರತದ ನಾಗರಿಕರು ಹೊಂದಿರಲೇಬೇಕಾದ ಕಾರ್ಡ್ ಆಗಿದೆ.
ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (ಎನ್ವಿಎಸ್ಪಿ) ಅಧಿಕೃತ ವೆಬ್ಸೈಟ್ನಲ್ಲಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಿದ ನಂತರ ಮತದಾರರ ಗುರುತಿನ ಚೀಟಿಯ ಸ್ಥಿತಿಯನ್ನು ಆನ್ಲೈನ್ ಮತ್ತು ಆಫ್ಲೈನ್ ಮಾರ್ಗಗಳಲ್ಲಿ ವೀಕ್ಷಿಸಬಹುದು . ವೋಟರ್ ಐಡಿ ಸ್ಥಿತಿಯನ್ನು ಪರಿಶೀಲಿಸುವುದು ಪಾರದರ್ಶಕ ಮತ್ತು ಸುಲಭ ಪ್ರಕ್ರಿಯೆಯಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ನಿಮ್ಮ ಮತದಾರರ ಗುರುತಿನ ಚೀಟಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಹೇಗೆ..? ಇಲ್ಲಿದೆ ಮಾಹಿತಿ.
ಆನ್ ಲೈನ್ ಮೋಡ್
*(https://www.nvsp.in/ ಅಥವಾ https://voters.eci.gov.in/ ) ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಅಧಿಕೃತ ವೆಬ್ಸೈಟ್ಗೆ ಹೋಗಿ.
“ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್” (ವೋಟರ್ ಐಡಿ ಸ್ಟೇಟಸ್) ಮೇಲೆ ಕ್ಲಿಕ್ ಮಾಡಿ.
*ಭಾರತೀಯ ನಿವಾಸಿ ಮತದಾರರಿಗೆ, ಮತದಾರರ ಗುರುತಿನ ಚೀಟಿ ನೋಂದಣಿಯ ಸಮಯದಲ್ಲಿ ನೀವು *ಸ್ವೀಕರಿಸಿದ ನಿಮ್ಮ ‘ರೆಫರೆನ್ಸ್ ಐಡಿ’ ಅನ್ನು ನಮೂದಿಸಿ ಮತ್ತು ‘ರಾಜ್ಯ’ ಆಯ್ಕೆ ಮಾಡಿ.
*’ಟ್ರ್ಯಾಕ್ ಸ್ಟೇಟಸ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ವೋಟರ್ ಐಡಿ ಸ್ಥಿತಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಆಫ್ ಲೈನ್ ಮೋಡ್ ಮೂಲಕ ಕಾರ್ಡ್ ಸ್ಥಿತಿ
ನಿಮ್ಮ ಕ್ಷೇತ್ರದ ಹತ್ತಿರದ ಮತದಾರರ ನೋಂದಣಿ ಕಚೇರಿಯನ್ನು (ಇಆರ್ಒ) ಹುಡುಕಿ ಮತ್ತು ಭೇಟಿ ನೀಡಿ.
ಮತದಾರರ ಹೆಸರು, ಪ್ರಸ್ತುತ ವಿಳಾಸ, ಅರ್ಜಿ ಉಲ್ಲೇಖ ಸಂಖ್ಯೆ ಮತ್ತು ಸ್ವೀಕೃತಿ ಸಂಖ್ಯೆಯಂತಹ ಪ್ರಮುಖ ವಿವರಗಳನ್ನು ನೀವು ಚುನಾವಣಾ ನೋಂದಣಿ ಕಚೇರಿಗೆ ಒದಗಿಸಬೇಕು.
ನಿಮ್ಮ ಮತದಾರರ ಗುರುತಿನ ಚೀಟಿಯ ಸ್ಥಿತಿಯನ್ನು ಚುನಾವಣಾ ನೋಂದಣಿ ಕಚೇರಿ (ಇಆರ್ಒ) ನಿಮಗೆ ತಿಳಿಸುತ್ತದೆ. ಇಆರ್ಒ ವಿವರಗಳು ನಿಮಗೆ ತಿಳಿದಿಲ್ಲದಿದ್ದರೆ, ನೀವು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
ಕರೆ ಮೂಲಕ ಅಪ್ಲಿಕೇಶನ್ ಸ್ಥಿತಿ
*ಫೋನ್ ಮೂಲಕ ನಿಮ್ಮ ಮತದಾರರ ಗುರುತಿನ ಅರ್ಜಿಯ ಸ್ಥಿತಿಯ ಬಗ್ಗೆ ವಿಚಾರಿಸಲು, ನೀವು ಟೋಲ್ ಫ್ರೀ ಸಂಖ್ಯೆ 1950 ಗೆ ಡಯಲ್ ಮಾಡಬಹುದು. ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಯಲು ಒದಗಿಸಿದ ಸೂಚನೆಗಳನ್ನು ಅನುಸರಿಸಿ.