ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಸಬಹುದಾದ ಪ್ರಮುಖ ವಿಷಯಗಳಾಗಿವೆ.ಆನ್ ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಆನ್ ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ.
ನಿಮಗೆ ಬರೀ ವಾಹನ ಓಡಿಸಲು ಬಂದರೆ ಸಾಲದು ಲೈಸೆನ್ಸ್ ಕೂಡ ಇರಬೇಕು. ವಾಹನವನ್ನು ಓಡಿಸಲು ಕಾನೂನುಬದ್ಧವಾಗಿ ಪರವಾನಗಿ ಅಗತ್ಯವಿದೆ. ಚಾಲನಾ ಪರವಾನಗಿ ಪಡೆಯಲು, ನೀವು ಸರ್ಕಾರದ ನಿಯಮಗಳನ್ನು ಅನುಸರಿಸಬೇಕು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
ನೀವು ಗಮನಿಸಬೇಕಾದ ವಿಷಯವೆಂದರೆ ನೀವು ಪರವಾನಗಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೂ, ನಿಮ್ಮ ಪರವಾನಗಿ ಪಡೆಯಲು ನೀವು ಹತ್ತಿರದ ಆರ್ ಟಿಒ ಕಚೇರಿಗೆ ಹೋಗಬೇಕಾಗುತ್ತದೆ. ಅಲ್ಲದೆ, ನೀವು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಸಂಚಾರ ನಿಯಮಗಳ ಬಗ್ಗೆ ಜಾಗರೂಕರಾಗಿರಿ. ನಿಮ್ಮ ವಯಸ್ಸು ಮತ್ತು ಇತರ ಅಗತ್ಯ ದಾಖಲೆಗಳನ್ನು ನೀವು ಹೊಂದಿರಬೇಕು.
ಅರ್ಜಿ ಸಲ್ಲಿಸುವ ಹಂತಗಳು
1) ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ https://parivahan.gov.in/parivahan/ ಅಧಿಕೃತ ಸರ್ಕಾರಿ ವೆಬ್ ಸೈಟ್ ಗೆ ಹೋಗಿ.
2) ಆನ್ ಲೈನ್ ಸೇವೆಗಳ ಆಯ್ಕೆಗೆ ಹೋಗಿ ಮತ್ತು ಚಾಲನಾ ಪರವಾನಗಿ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.
3) ನಂತರ ನೀವು ವಾಸಿಸುವ ರಾಜ್ಯವನ್ನು ಆಯ್ಕೆ ಮಾಡಿ.
‘4) ಲರ್ನರ್ಸ್ ಲೈಸೆನ್ಸ್ ಅಪ್ಲಿಕೇಶನ್’ ಆಯ್ಕೆಯನ್ನು ಆರಿಸಿ.
5) ಇಲ್ಲಿ ಪಟ್ಟಿ ಮಾಡಲಾದ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ. ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
6) ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
7) ಕಲಿಕಾ ಪರವಾನಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
8) ಅಂತಿಮವಾಗಿ ಪರೀಕ್ಷೆಯ ದಿನಾಂಕವನ್ನು ಆಯ್ಕೆ ಮಾಡಿ ಮತ್ತು ಪಾವತಿ ಮಾಡಿ.
ಸ್ಲಾಟ್ ಅನ್ನು ಅವಲಂಬಿಸಿ, ನೀವು ಸಮಯ ಮತ್ತು ದಿನಾಂಕವನ್ನು ಪಡೆಯುತ್ತೀರಿ. ನಂತರ ನೀವು ಹತ್ತಿರದ ಆರ್ ಟಿಒ ಕಚೇರಿಗೆ ಹೋಗಿ ಪರೀಕ್ಷೆ ಬರೆಯಬೇಕು. ನೀವು ಟ್ರಾಫಿಕ್ ಸಿಗ್ನಲ್ ಗಳು ಮತ್ತು ನಿಯಮಗಳ ಬಗ್ಗೆ ತಿಳಿದಿರಬೇಕು. ಆಗ ಮಾತ್ರ ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರಿ. ಆಗ ಮಾತ್ರ ಪರವಾನಗಿ ಬರುತ್ತದೆ.