ಇದುವರೆಗೆ ನೀವು ಒಂದು ನಂಬರ್ ಗೆ ಕರೆ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ರಿ, ನಂಬರ್ ಕರೆ ಮಾಡಿ ಅಲ್ಲಿ ಬರುವ ಸೂಚನೆಗಳನ್ನು ಆಲಿಸಿಕೊಂಡು ಸಂಖ್ಯೆಗಳನ್ನು ಒತ್ತುವ ಮೂಲಕ ಗ್ಯಾಸ್ ಬುಕ್ ಮಾಡುತ್ತಿದ್ರಿ, ಆದ್ರೆ ಇನ್ನುಮುಂದೆ ಬಹಳ ಸುಲಭವಾಗಿ ಗ್ಯಾಸ್ ಬುಕ್ ಮಾಡಬಹುದು.
ಹೌದು, ಕೇವಲ ವಾಟ್ಸಾಪ್ನಲ್ಲಿಯೇ ನೀವು ಸುಲಭವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದಾಗಿದೆ. ನೀವು ಕೊಡುವ ಕೆಲವು ಪ್ರಮುಖ ದಾಖಲೆಗಳಿಂದ ವಾಟ್ಸಾಪ್ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಲು ಸಾಧ್ಯವಿದೆ.
ಬುಕ್ ಮಾಡುವುದು ಹೇಗೆ..?
1) ಇಂಡೆನ್ ಗ್ಯಾಸ್ ಅನ್ನು ವಾಟ್ಸಪ್ ಮೂಲಕ ಬುಕ್ ಮಾಡಿಕೊಳ್ಳಲು, 7588888824 ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ.ಅಥವಾ ವಾಟ್ಸಪ್ ನಲ್ಲಿ ಈ ಸಂಖ್ಯೆಯನ್ನು ಟೈಪ್ ಮಾಡಿ ಅದಕ್ಕೆ BOOK ಅಥವಾ REFILL ಎಂದು ಟೈಪ್ ಮಾಡಿ ಸಂದೇಶ ಕಳುಹಿಸಿ.
2) ಸಂದೇಶ ಕಳುಹಿಸಿದ ಬಳಿಕ ನಿಮಗೆ ಗ್ಯಾಸ್ ಯಾವಾಗ ಮನೆ ಬಾಗಿಲಿಗೆ ಬರುತ್ತದೆ ಎನ್ನುವ ದಿನಾಂಕದ ಜೊತೆಗೆ ರಿಪ್ಲೈ ಬರುತ್ತದೆ.ನೀವು ನಿಮ್ಮ ಗ್ಯಾಸ್ ಬುಕಿಂಗ್ ಸ್ಟೇಟಸ್ ತಿಳಿದುಕೊಳ್ಳಲು ಮೇಲೆ ತಿಳಿಸಿರುವ ಸಂಖ್ಯೆಗೆ ಆರ್ಡರ್ ಸಂಖ್ಯೆಯನ್ನು ಮಾಡಿದರೆ, ಸ್ಟೇಟಸ್ ಮೆಸೇಜ್ ಅನ್ನು ಪಡೆಯುತ್ತೀರಿ.
HP ಗ್ಯಾಸ್ ಬುಕಿಂಗ್ ಮಾಡುವುದು ಹೇಗೆ..?
HP ಗ್ಯಾಸ್ ಬುಕಿಂಗ್ ಮಾಡಲು ನೀವು ನಿಮ್ಮ ವಾಟ್ಸಪ್ ನಲ್ಲಿ 9222201122 ಈ ಸಂಖ್ಯೆಗೆ ಮೆಸೇಜ್ ಮಾಡಬೇಕು. ನಂತರ ಕೆಲವೇ ಸೆಕೆಂಡ್ ಗಳಲ್ಲಿ ನಿಮಗೆ ಬುಕಿಂಗ್ ದಿನಾಂಕದ ಜೊತೆಗೆ ರಿಪ್ಲೈ ಬರುತ್ತದೆ. ನಿಮ್ಮ ಬುಕಿಂಗ್ ಆರ್ಡರ್ ನಂಬರ್ ಕೂಡ ಕೊಡಲಾಗಿರುತ್ತದೆ.
ನೀವು ಭಾರತ್ ಗ್ಯಾಸ್ ಗ್ರಾಹಕರಾಗಿದ್ದರೆ ಹೇಗೆ..?
ನೀವು ಭಾರತ್ ಗ್ಯಾಸ್ ಗ್ರಾಹಕರಾಗಿದ್ದರೆ ಬುಕಿಂಗ್ ಮಾಡಿಕೊಳ್ಳಲು 7718955555 ಈ ನಂಬರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ತಕ್ಷಣ ನಿಮಗೆ ಗ್ಯಾಸ್ ಸಿಲೆಂಡರ್ ಯಾವಾಗ ನಿಮ್ಮ ಕೈ ಸೇರುತ್ತದೆ ಎನ್ನುವ ದಿನಾಂಕ ಹಾಗೂ ಆರ್ಡರ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಹಾಗೂ https://my.ebharatgas.com/bharatgas/Home/Index ಈ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ನಿಮ್ಮ ರಿಜಿಸ್ಟ್ರರ್ಡ್ ಗ್ಯಾಸ್ ಬುಕಿಂಗ್ ಸಂಖ್ಯೆಯನ್ನು ಹಾಕಿ ಗ್ಯಾಸ್ ಬುಕ್ ಮಾಡಿಕೊಳ್ಳಬಹುದು.