ಶಿವಮೊಗ್ಗ, : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಇವರ ಸಂಯುಕ್ತಾಶ್ರಯದಲ್ಲಿ ಜ.21 ರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಶಿಬಿರ ಹಮ್ಮಿಕೊಳ್ಳಲಾಗಿದೆ.
ಜ.21 ರಂದು ಸಾಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಗೌತಮಪುರ, ಸಂಪರ್ಕಿಸಬೇಕಾದ ದೂ.ಸಂ: 9535247757. ಹೊಸನಗರ ಸಂಯುಕ್ತ ಆಸ್ಪತ್ರೆ, ನಗರ, ದೂ.ಸಂ: 9731922693, ಜ.22 ರಂದು ತೀರ್ಥಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಗಾರು, ದೂ.ಸಂ 9480767638. ಜ.24 ರಂದು ಭದ್ರಾವತಿಯ ಸಮುದಾಯ ಆರೋಗ್ಯ ಕೇಂದ್ರ ಹೊಳೆಹೊನ್ನೂರು, ದೂ.ಸಂ: 7899137243. ಜ.28 ರಂದು ಶಿವಮೊಗ್ಗದ ಸಮುದಾಯ ಆರೋಗ್ಯ ಕೇಂದ್ರ ಆಯನೂರು, ದೂ.ಸಂ: 9980150110. ಸೊರಬದಲ್ಲಿ ಸಾರ್ವಜನಿಕ ಆಸ್ಪತ್ರೆ ಸೊರಬ, ದೂ.ಸಂ: 9110493122. ಜ.31 ರಂದು ಶಿಕಾರಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾರಗೊಪ್ಪ, ದೂ.ಸಂ: 9741161346 ಇಲ್ಲಿ ಶಿಬಿರ ನಡೆಸಲಾಗುತ್ತದೆ.
60 ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಶಿಬಿರಕ್ಕೆ ಹಾಜರಾಗಲು ವಯಸ್ಸಿನ ಸಂಬAಧ ಜನ್ಮ ದಿನಾಂಕ ನಮೂದಾಗಿರುವ ದಾಖಲಾತಿ ಅಂದರೆ ಇಲಾಖೆಯಿಂದ ವಿತರಿಸಲಾದ ಹಿರಿಯ ನಾಗರಿಕ ಗುರುತಿನ ಚೀಟಿ, ಪಾನ್ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಶಾಲಾ/ ಕಾಲೇಜು ದಾಖಲಾತಿ ಹಾಗೂ ಆಧಾರ ಕಾರ್ಡ್ ಮತ್ತು ಪಡಿತರ ಚೀಟಿ ಕಡ್ಡಾಯವಾಗಿ ತರತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನ ಸಲಹೆ ಮತ್ತು ಮಾಹಿತಿ ಕೇಂದ್ರ ದೂ.ಸಂ; 08182251676, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ದೂ.ಸಂ:08182222382, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ದೂ.ಸಂ:08182221188, ಅಂಗವಿಕಲರ ಪುನರ್ವಸತಿ ಕೇಂದ್ರ ದೂ.ಸಂ:08182488438, ಮೊ;8088620178 ಸಂಪರ್ಕಿಸಬಹುದೆAದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.