ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿತಾಂತ್ರಿಕ ಸಹಾಯಕ ಹುದ್ದೆಯ ಅರ್ಹ ಅಭ್ಯರ್ಥಿಗಳಿಗೆ ಡಿ.26ರಿಂದ ಡಿ.28ರವರೆಗೆ ಪರೀಕ್ಷೆ ನಡೆಯಲಿದ್ದು, ಇಂದು ಕರಪತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಶಾಂತಿನಗರದ ಕೇಂದ್ರ ಕಚೇರಿ ಸಭಾಂಗಣ ದಲ್ಲಿಡಿ.26ರಿಂದ ಡಿ.28ರವರೆಗೆ ದೇಹದಾರ್ಢತೆ ಹಾಗೂ ದಾಖಲಾತಿ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಸೋಮವಾರ ಇಂದು ಮಧ್ಯಾಹ್ನ 1 ಗಂಟೆ ಬಳಿಕ KSRTCJOBS.COM ವೆಬ್ಸೈಟ್ನಿಂದ ಕರೆಪತ್ರ ಡೌನ್ ಲೋಡ್ ಮಾಡಿ ಅಗತ್ಯ ದಾಖಲೆ ಸಮೇತ ಬರಬೇಕು. ಹೆಚ್ಚಿನ ಮಾಹಿತಿಗಾಗಿ 080 – 22221231, 7760990061, 7760990044,7760981930 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.