ದೇಶದಲ್ಲಿ ಡಿಜಿಟಲ್ ವಹಿವಾಟು ಪ್ರಾರಂಭವಾದಾಗಿನಿಂದ ಜನರು ತಮ್ಮ ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ. ಎಲ್ಲರೂ ಆನ್ ಲೈನ್ ವಹಿವಾಟು ನಡೆಸುತ್ತಿದ್ದಾರೆ. ಆದರೆ ಹಣ ತೆಗೆಯಲು ಬ್ಯಾಂಕ್ ಅಥವಾ ಎಟಿಎಂಗಳಿಗೆ ಹೋಗಲೇ ಬೇಕು.
ಎಟಿಎಂನಿಂದ ನಕಲಿ ನೋಟು ಬಂದರೆ ಏನು ಮಾಡಬೇಕು?
ದೇಶದಲ್ಲಿ 30 ಲಕ್ಷ ಕೋಟಿ ರೂ.ಗಳ ವಹಿವಾಟು ನಗದು ಅಥವಾ ಕರೆನ್ಸಿ ರೂಪದಲ್ಲಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಎಟಿಎಂನಿಂದ ನಕಲಿ ನೋಟುಗಳು ಬಂದಿರುವ ಹಲವು ನಿದರ್ಶನಗಳನ್ನು ನಾವು ಕೇಳಿದ್ದೇವೆ. ಈ ತರಹ ಆದರೆ ಈ ವಿಧಾನದ ಮೂಲಕ ನೀವು ನಕಲಿ ನೋಟು ಕೊಟ್ಟು ಒರಿಜಿನಲ್ ನೋಟು ಪಡೆಯಬಹುದು.
1) ನೀವು ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಿದ್ದರೆ, ಈ ನೋಟು ನೈಜವಲ್ಲ ಎಂದು ನಿಮಗೆ ಸ್ವಲ್ಪವಾದರೂ ಅನಿಸಿದರೆ, ಮೊದಲು ಅದರ ಫೋಟೋ ತೆಗೆದುಕೊಳ್ಳಿ.
2) ನಂತರ, ಎಟಿಎಂನಲ್ಲಿ ಫಿಕ್ಸ್ ಮಾಡಲಾದ ಸಿಸಿಟಿವಿ ಕ್ಯಾಮೆರಾದ ಮುಂದೆ ನೋಟನ್ನು ತಲೆಕೆಳಗಾಗಿ ತೋರಿಸಬೇಕು. ನೋಟು ಎಟಿಎಂನಿಂದಲೇ ಹೊರಬಂದಿದೆ ಎಂದು ಕ್ಯಾಮೆರಾ ದಾಖಲಿಸುತ್ತದೆ.
3) ನಂತರ ನಿಮ್ಮ ಎಟಿಎಂ ವಹಿವಾಟಿನ ರಸೀದಿಯನ್ನು ತೆಗೆದುಕೊಳ್ಳಿ, ಅದರ ಫೋಟೋ ತೆಗೆದುಕೊಂಡು ಅದನ್ನು ಸೇವ್ ಮಾಡಿಕೊಳ್ಳಿ.
4) ನಂತರ ಎಟಿಎಂನಿಂದ ನೋಟು ಮತ್ತು ರಸೀದಿಯೊಂದಿಗೆ ಬ್ಯಾಂಕಿಗೆ ಹೋಗಿ. ಇಡೀ ವಿಷಯದ ಬಗ್ಗೆ ಬ್ಯಾಂಕ್ ಉದ್ಯೋಗಿಗೆ ತಿಳಿಸಿ. ನಂತರ ನಿಮಗೆ ಒಂದು ಫಾರ್ಮ್ ಅನ್ನು ಒದಗಿಸಲಾಗುತ್ತದೆ. ಅದನ್ನು ಭರ್ತಿ ಮಾಡಿದ ನಂತರ, ನಕಲಿ ನೋಟಿನ ಜೊತೆಗೆ ರಸೀದಿಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ.
5) ನಂತರ ಬ್ಯಾಂಕ್ ಈ ನಕಲಿ ನೋಟನ್ನು ಪರಿಶೀಲಿಸಿ ಮತ್ತು ನಂತರ ನಿಮಗೆ ಒರಿಜಿನಲ್ ನೋಟನ್ನು ನೀಡುತ್ತದೆ.