alex Certify ಗಮನಿಸಿ : ನೀವು ಈ ಬಾರಿ ‘ಗಣರಾಜ್ಯೋತ್ಸವ’ ಪರೇಡ್ ನಲ್ಲಿ ಪಾಲ್ಗೊಳ್ಳಬೇಕೆ ? ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ನೀವು ಈ ಬಾರಿ ‘ಗಣರಾಜ್ಯೋತ್ಸವ’ ಪರೇಡ್ ನಲ್ಲಿ ಪಾಲ್ಗೊಳ್ಳಬೇಕೆ ? ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿ

ನವದೆಹಲಿ : 75 ನೇ ಗಣರಾಜ್ಯೋತ್ಸವ ಆಚರಣೆಗೆ ದೆಹಲಿ ಸಜ್ಜಾಗಿದೆ. ಜ. 26 ರಂದು ರಾಷ್ಟ್ರರಾಜಧಾನಿಯ ರಾಜಪಥದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಆಚರಿಸಲಾಗುತ್ತಿದೆ.

ನೀವು ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕೆ ? ಟಿಕೆಟ್ ಹೇಗೆ ಬುಕ್ ಮಾಡೋದು..? ಯಾರನ್ನು ಕೇಳಬೇಕು ಎಂದು ತಿಳಿದಿಲ್ಲವೇ..ಇಲ್ಲಿದೆ ನೋಡಿ ಮಾಹಿತಿ.

1) ಮೊದಲು ನೀವು ಆಮಂತ್ರಣ ನಿರ್ವಹಣಾ ವ್ಯವಸ್ಥೆ (ಐಎಂಎಸ್ ) ಅಥವಾ ರಕ್ಷಣಾ ಸಚಿವಾಲಯದ ಆಮಂತ್ರನ್ ಆನ್ಲೈನ್ ಪೋರ್ಟಲ್ಗೆ ಭೇಟಿ ನೀಡಿ.
2) ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಪಡೆಯಿರಿ
3) ನಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಕ್ಯಾಪ್ಚಾ ಕೋಡ್ನಂತಹ ವಿವರಗಳನ್ನು ಎಂಟ್ರಿ ಮಾಡಿ
4) ನಂತರ ಗಣರಾಜ್ಯೋತ್ಸವ ಪರೇಡ್ ಆಯ್ಕೆಮಾಡಿ. ನಂತರ ಐಡಿ ಪ್ರಕಾರವನ್ನು ಆಯ್ಕೆಮಾಡಿ ನಂತರ ನಿಮ್ಮ ಗುರುತಿನ ಚೀಟಿ ಅಪ್ ಲೋಡ್ ಮಾಡಿ ನಂತರ ಆನ್ಲೈನ್ ಪೇಮೆಂಟ್ ಮಾಡಿ ಟಿಕೆಟ್ ಪಡೆದುಕೊಳ್ಳಬಹುದು.

ಕಳೆದ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಕರ್ನಾಟಕದಿಂದ ನಾರಿ ಶಕ್ತಿ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು. ಸ್ತಬ್ಧ ಚಿತ್ರದ ಮೂಲಕ ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಗಳ ಅನಾವರಣಗೊಳಿಸಲಾಗಿತ್ತು.  ಈ ಬಾರಿ ಕರ್ನಾಟಕದಿಂದ  ಬ್ರ್ಯಾಂಡ್ ಬೆಂಗಳೂರು ಸ್ತಬ್ದಚಿತ್ರ ಅನಾವರಣಗೊಳ್ಳಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...