alex Certify ಗಮನಿಸಿ : ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಡಿ.14 ಕೊನೆಯ ದಿನ, ಜಸ್ಟ್ ಹೀಗೆ ಅಪ್ ಡೇಟ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಡಿ.14 ಕೊನೆಯ ದಿನ, ಜಸ್ಟ್ ಹೀಗೆ ಅಪ್ ಡೇಟ್ ಮಾಡಿ

ಆಧಾರ್ ಕಾರ್ಡ್ ಭಾರತದಲ್ಲಿನ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಇದನ್ನು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಮತ್ತು ಇತರೆ ಹಲವು ಉದ್ದೇಶಗಳಿಗೆ ಬಳಸಲಾಗುತ್ತದೆ. ಸದ್ಯ ಆಧಾರ್ ಕಾರ್ಡ್ ನ್ನು ಉಚಿತವಾಗಿ ಅಪ್ ಡೇಟ್ ಮಾಡಲು ಡಿ.14 ರವರೆಗೆ ಅವಕಾಶ ನೀಡಲಾಗಿದ್ದು, ಬೇಗ ಬೇಗ ಅಪ್ ಡೇಟ್ ಮಾಡಿಕೊಳ್ಳಲಾಗಿದೆ.

UIDAI ನ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಯಾವುದೇ ನಾಗರಿಕರು ತಮ್ಮ ಬಯೋಮೆಟ್ರಿಕ್ ಮಾಹಿತಿ ಮತ್ತು ಹೆಸರು, ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ, ಪಿನ್ ಮುಂತಾದ ಜನಸಂಖ್ಯಾ ಡೇಟಾವನ್ನು ಆನ್ಲೈನ್ನಲ್ಲಿ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಅಪ್ಡೇಟ್ ಮಾಡಬಹುದು. ಇದಕ್ಕಾಗಿ ನೀವು ಯಾವುದೇ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಈ ರೀತಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡ್ಕೊಳ್ಳಿ

• ಮೊದಲು UIDAI ನ ಅಧಿಕೃತ ವೆಬ್ಸೈಟ್ ಕ್ಲಿಕ್ ಮಾಡಿ.
• ನೀವು ಆಧಾರ್ ನವೀಕರಣದ ಆಯ್ಕೆಯನ್ನು ಆರಿಸಬೇಕಾಗುತ್ತದೆ.
• ಉದಾಹರಣೆಗೆ, ವಿಳಾಸವನ್ನು ನವೀಕರಿಸಲು, ನೀವು ವಿಳಾಸವನ್ನು ನವೀಕರಿಸುವ ಆಯ್ಕೆಯನ್ನು ಆರಿಸಬೇಕಾಗುತ್ತದೆ.
• ನೋಂದಾಯಿತ ಮೊಬೈಲ್ ಸಂಖ್ಯೆೀ ನಮೂದಿಸಿದ ನಂತರ, OTP ಅನ್ನು ಎಂಟ್ರಿ ಮಾಡಿ .
• ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
• ಮುಂದೆ ನೀವು ಆಧಾರ್ಗೆ ಸಂಬಂಧಿಸಿದ ವಿವರಗಳನ್ನು ನೋಡುತ್ತೀರಿ.
• ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.ನಂತರ, ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.ಇದರ ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ. ಈ ಮೂಲಕ ನೀವು ಟ್ರ್ಯಾಕ್ ಮಾಡಬಹುದು.

ಎಸ್ಎಂಎಸ್ ಮೂಲಕವೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್

ಎಸ್ಎಂಎಸ್ ಮೂಲಕವೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇದು ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸ ಇರಬಹುದು. ಇದರ ಕುರಿತಂತೆ ಬ್ಯಾಂಕ್ನ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಯಾವ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು ಎಂದು ತಿಳಿದುಕೊಳ್ಳಬಹುದು. ಗೂಗಲ್ನಲ್ಲಿ ಹುಡುಕಿದರೂ ಮಾಹಿತಿ ದೊರಕುತ್ತದೆ. ಉದಾಹರಣೆಗೆ ನಿಮ್ಮದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಯಾಗಿದ್ದರೆ ನೀವು 567676 ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ( UID Aadhaar numberAccount number and send it to 567676.) ಅಂದರೆ, ಯುಐಡಿ ಆಧಾರ್ ಸಂಖ್ಯೆ ಬ್ಯಾಂಕ್ ಅಕೌಂಟ್ ಸಂಖ್ಯೆ ಟೈಪಿಸಿ 567676 ಸಂಖ್ಯೆಗೆ ಕಳುಹಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...