ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ 2024) ನೋಂದಣಿಯನ್ನು ನವೆಂಬರ್ 27 ರಂದು ಮುಕ್ತಾಯಗೊಳಿಸಲಿದೆ.
ಆಸಕ್ತ ಅಭ್ಯರ್ಥಿಗಳು ಸಿಟಿಇಟಿ 2024 ಗಾಗಿ ಅಧಿಕೃತ ವೆಬ್ಸೈಟ್- ctet.nic.in ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಸಿಟಿಇಟಿ ಅರ್ಜಿ ಶುಲ್ಕವು ಕೇವಲ ಒಂದು ಪತ್ರಿಕೆಗೆ 1000 ರೂ., ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 500 ರೂ. ಎರಡೂ ಪತ್ರಿಕೆಗಳಿಗೆ ಅರ್ಜಿ ಶುಲ್ಕ 1,200 ರೂ., ಮೀಸಲಾತಿ ವರ್ಗಗಳಿಗೆ 600 ರೂ. ಆಗಿದೆ.
ವಯೋಮಿತಿ: ಸಿಟಿಇಟಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 17 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಸಿಟಿಇಟಿ 2024 ಗೆ ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ.
ವಿದ್ಯಾರ್ಹತೆ: ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.55ರಷ್ಟು ಅಂಕಗಳೊಂದಿಗೆ 3 ವರ್ಷದ ಬಿ.ಎಡ್/ಎಂ.ಎಡ್ ಪದವಿ ಪಡೆದಿರಬೇಕು.
ಸಿಟಿಇಟಿ 2024 ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್- ctet.nic.in ಗೆ ಭೇಟಿ ನೀಡಬೇಕಾಗುತ್ತದೆ. ಸಿಟಿಇಟಿ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯಲ್ಲಿ ವಿವರಗಳನ್ನು ನಮೂದಿಸಿ ಮತ್ತು ದಾಖಲೆಗಳನ್ನು ಅಪ್ ಲೋಡ್ ಮಾಡಿ. ಸಿಎಟಿ 2023 ನೋಂದಣಿ ಶುಲ್ಕವನ್ನು ಪಾವತಿಸಿ, ಸಲ್ಲಿಸು ಕ್ಲಿಕ್ ಮಾಡಿ. ಸಿಎಟಿ ಅರ್ಜಿ ನಮೂನೆಯನ್ನು ಉಳಿಸಿ, ಅದನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಸಿಟಿಇಟಿ 2024 ಅರ್ಜಿ: ಅರ್ಜಿ ಸಲ್ಲಿಸಲು ಹಂತಗಳು ctet.nic.in
* ಸಿಟಿಇಟಿ 2024 ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ctet.nic.in
*ನೋಂದಣಿ ನಮೂನೆಯಲ್ಲಿ ಹೆಸರು, ವಯಸ್ಸು, ಶೈಕ್ಷಣಿಕ ಅರ್ಹತೆ, ವಿಳಾಸ, ವಿವರಗಳನ್ನು ನಮೂದಿಸಿ
*ಸಿಟಿಇಟಿ ಅರ್ಜಿ ಶುಲ್ಕ ಪಾವತಿಸಿ
*ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
*ಸಿಟಿಇಟಿ ನೋಂದಣಿ ಫಾರ್ಮ್ ಡೌನ್ಲೋಡ್ ಮಾಡಿ, ಅದನ್ನು ಉಳಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
*ಸಿಟಿಇಟಿ ಜನವರಿ 21, 2024 ರಂದು ದೇಶಾದ್ಯಂತ 135 ನಗರಗಳಲ್ಲಿ ನಡೆಯಲಿದೆ. ಸಿಟಿಇಟಿಯನ್ನು 20 ವಿವಿಧ ಭಾಷೆಗಳಲ್ಲಿ ಆಯೋಜಿಸಲಾಗುವುದು.
*ಸಿಟಿಇಟಿ ಪರೀಕ್ಷೆಯು ಇಂಗ್ಲಿಷ್, ಹಿಂದಿ ಜೊತೆಗೆ ಗುಜರಾತಿ, ಮರಾಠಿ, ಸಂಸ್ಕೃತ, ಕನ್ನಡ, ಮಿಜೋ, ತಮಿಳು, ಅಸ್ಸಾಮಿ, ಖಾಸಿ, ನೇಪಾಳಿ, ತೆಲುಗು, ಬಂಗಾಳಿ, ಮಲಯಾಳಂ, ಒಡಿಯಾ, ಟಿಬೆಟಿಯನ್, ಗಾರೊ, ಮಣಿಪುರಿ, ಪಂಜಾಬಿ, ಉರ್ದು ಭಾಷೆಗಳಲ್ಲಿ ನಡೆಯಲಿದೆ.