ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಸುಮಾರು 11.5 ಕೋಟಿ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಇತ್ತೀಚೆಗೆ ಮಾಹಿತಿ ನೀಡಿದೆ.
ಹೌದು. ಇದುವರೆಗೆ ಯಾರೆಲ್ಲಾ ಆಧಾರ್ ಲಿಂಕ್ ಮಾಡಿಲ್ವೋ..? ಅಂತಹವರ ಪಾನ್ ಕಾರ್ಡ್ ನ್ನು ಸರ್ಕಾರ ರದ್ದು ಮಾಡುತ್ತಿದೆ. ಯಾರೆಲ್ಲಾ ಜುಲೈ 1 2017 ಮೊದಲು ಪ್ಯಾನ್ ಕಾರ್ಡ್ ಪಡೆದಿದ್ದಾರೆ ಅವರ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ.ಆದ್ದರಿಂದ ಅಂತಹವರು ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಲಾಗಿತ್ತು.
ಕೇಂದ್ರ ಸರ್ಕಾರ ಹಲವರ ಪ್ಯಾನ್ ಕಾರ್ಡ್ ರದ್ದಾಗಿದ್ದು, ಲಿಸ್ಟ್ ನಲ್ಲಿ ನಿಮ್ಮ ಹೆಸರು ಉಂಟಾ ಎಂದು ಈ ರೀತಿ ಚೆಕ್ ಮಾಡ್ಕೊಳ್ಳಿ . ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎನ್ನುವ ಅನುಮಾನಗಳಿದ್ದರೆ ಈ ವಿಧಾನದ ಮೂಲಕ ಚೆಕ್ ಮಾಡಿ .
* ಮೊದಲಿಗೆ https://www.incometax.gov.in/iec/foportal/ ಟೈಪ್ ಮಾಡಿ, ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
* link aadhaar status ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ನಂಬರ್ ನಮೂದಿಸಿ. ನಂತರ View link aadhaar status ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ಮಾಹಿತಿ ಸಿಗುತ್ತದೆ, ಒಂದು ವೇಳೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದ್ದರೆ ಅದರ ವಿವರವು ಸ್ಕ್ರೀನ್ ಮೇಲೆ ಬರುತ್ತದೆ. ಲಿಂಕ್ ಆಗದಿದ್ದರೂ ಲಿಂಕ್ ಆಗಿಲ್ಲ ಎಂದು ತೋರಿಸುತ್ತದೆ.
*ಒಂದು ವೇಳೆ ಇನ್ನೂ ನಿಮ್ಮ ಆಧಾರ್ ಲಿಂಕ್ ಆಗದಿದ್ದರೆ ಈ ಕೂಡಲೇ ದಂಡ ಕಟ್ಟಿ ಈ ಕೆಲಸ ಮಾಡಿ.