ಬೆಂಗಳೂರು : ಆಸ್ಪತ್ರೆಯಲ್ಲಿ ಮತ್ತು ನಂತರದ ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಇ- ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15 ರಿಂದ 7 ದಿನಗಳಿಗೆ ಕಡಿಮೆ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಆಸ್ಪತ್ರೆಯಲ್ಲಿ ಮತ್ತು ನಂತರದ ಜನನ ಪ್ರಮಾಣ ಪತ್ರದ ವಿತರಣೆಯ ಕುರಿತು ಉಲ್ಲೇಖ (1) ರಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ 4ನೇ ವರದಿಯ ಶಿಫಾರಸ್ಸು ಸಂಖ್ಯೆ 131 ಕೆ ಸಂಬಂಧಿಸಿದಂತೆ ಜನನ ಪತ್ರವನ್ನು ನೀಡುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡಬಾರದು ಅದನ್ನು ಸರಿಪಡಿಸುವುದು ಕಷ್ಟ.
ತುರ್ತು ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನು ಒಂದು ದಿನದೊಳಗೆ ಒದಗಿಸುವುದು.
ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತ ಕಸ್ಟಡಿಯಲ್ಲಿ ಇಡಬೇಕು ಮತ್ತು ಅವರು ಮತ್ತೆ ದಾಖಲೆಗಳನ್ನು ಸಲ್ಲಿಸುವಂತೆ ಕೇಳಬಾರದು.
ಅರ್ಜಿಯ ಪ್ರಕ್ರಿಯೆಯ ಹಂತದಲ್ಲಿ ಅರ್ಜಿದಾರರಿಗೆ ಎಸ್. ಎಮ್. ಎಸ್. ಕಳುಹಿಸಲು ಮತ್ತು ಸೇವೆಯನ್ನು ಅನುಮೋದಿಸಿದಾಗ ಆನ್ಲೈನ್ ಮೂಲಕ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರಬೇಕೆಂದು ಸಲಹೆ ನೀಡಿದರು.
ಶಿಫಾರಸ್ಸು ಎರಡು ಸೇವೆಗಳಿಗೆ ಸಕಾಲದ ಸಮಯದ ಮಿತಿಯನ್ನು 15 ದಿನಗಳಿಂದ 07 ದಿನಗಳವರಗೆ ಕಡಿಮೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಶಿಫಾರಸ್ಸು ಮಾಡಿದೆ.
ಉಲ್ಲೇಖ (2) ರಲ್ಲಿ ಜನನ ಮರಣ ನೋಂದಣಿಯ ಪ್ರಕ್ರಿಯೆಯ ಹಂತದಲ್ಲಿ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅವರ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದವರು ಈ ಕಳಕಂಡಂತೆ ಕ್ರಮವಹಿಸಲಾಗಿರುತ್ತದೆ.
ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸುವುದು.ನೋಂದಣಿ ಕುರಿತಂತೆ ಅರ್ಜಿದಾರರಿಗೆ ಎಸ್ ಎಮ್. ಎಸ್ ಕಳುಹಿಸಲಾಗುತ್ತಿದೆ.
ಇ-ಜನ್ಮ ತಂತ್ರಾಂಶದಲ್ಲಿ ಅನುಮೋದನೆಯಾಗಿರುವ ಜನನ ಮರಣ ಪ್ರಮಾಣ ಪತ್ರದಲ್ಲಿ ಸೇವಾಸಿಂಧು ತಂತ್ರಾಂಶದ ಮೂಲಕ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಸಕಾಲದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು 07 ದಿನಗಳ ಕಾಲಾವಧಿಯನ್ನು ನಿಗಧಿಪಡಿಸಲಾಗಿದೆ.