alex Certify ಗಮನಿಸಿ : ಕಲಾವಿದರಿಂದ 2000 ಮಾಸಾಶನ ಪಡೆಯಲು ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಕಲಾವಿದರಿಂದ 2000 ಮಾಸಾಶನ ಪಡೆಯಲು ಅರ್ಜಿ ಆಹ್ವಾನ

ಕನ್ನಡ ಮತ್ತು ಸಂಸ್ಕೃತಿ   ಇಲಾಖೆಯಿಂದ ನಾಡು ನುಡಿಯ ಸೇವೆಗೆ ಸಂಬಂಧಿಸಿದಂತೆ (ಕಲೆ, ಸಂಸ್ಕøತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ) (ಸಾಹಿತ್ಯ, ನಾಟಕ, ಜಾನಪದ ಕಲಾಪ್ರಕಾರಗಳಲ್ಲಿ, ಸಂಗೀತ, ನೃತ್ಯ, ಚಿತ್ರಕಲೆ, ಲಲಿತ ಕಲೆ, ಹಾಗೂ ಯಕ್ಷಗಾನ) ಕಲೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಪ್ರತಿ ತಿಂಗಳು ರೂ. 2 ಸಾವಿರ ಮಾಸಾಶನವನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗೆ ವರ್ಷ ಪೂರ್ತಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹತೆ: ಅರ್ಜಿ ಸಲ್ಲಿಸುವ ಫಲಾನುಭವಿಯ ವಯಸ್ಸು 58 ವರ್ಷ ಪೂರ್ಣಗೊಂಡಿರಬೇಕು. ಅರ್ಜಿದಾರರು 25 ವರ್ಷಗಳ ಕಲಾಸೇವೆಗಳ ದಾಖಲಾತಿಗಳನ್ನು ಸಲ್ಲಿಸಬೇಕು. ವಯಸ್ಸಿನ ದೃಢೀಕರಣ ಪತ್ರವನ್ನು ಒಂದನೇ ತರಗತಿಗೆ ಸೇರಿದ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗೆ ದಾಖಲಾಗಿರುವ ಜನನ ದಿನಾಂಕವನ್ನು ಶಾಲೆಯಿಂದ ಪಡೆದು ಸಲ್ಲಿಸತಕ್ಕದ್ದು ಅಥವಾ ಶಾಲೆಗೆ ಹೋಗದಿದ್ದಲ್ಲಿ ನ್ಯಾಯಾಲಯದ ನ್ಯಾಯಾಧೀಶರಿಂದ ಜನನ ದಿನಾಂಕದ ಬಗ್ಗೆ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸುವುದು. ಸರ್ಕಾರದ ವತಿಯಿಂದ ಯಾವುದೇ ಇತರೇ ಸವಲತ್ತುಗಳನ್ನು ಪಡೆಯುತ್ತಿಲ್ಲದಿರುವ ಬಗ್ಗೆ ಸ್ಥಳೀಯ ತಹಶೀಲ್ದಾರ್ವರಿಂದ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿದಾರರ ವಾರ್ಷಿಕ ಆದಾಯ ರೂ. 1 ಲಕ್ಷ ಮಿತಿಯಲ್ಲಿರಬೇಕು.

ವಿಕಲಚೇತನ ಕಲಾವಿದರು / ಸಾಹಿತಿಗಳು ಅರ್ಜಿಯೊಂದಿಗೆ ಅರ್ಜಿ ಸಲ್ಲಿಸುವ ಫಲಾನುಭವಿಯ ವಯಸ್ಸು 40 ವರ್ಷ ಪೂರ್ಣಗೊಂಡಿರಬೇಕು. ಅರ್ಜಿದಾರರು 20 ವರ್ಷಗಳ ಕಲಾಸೇವೆಗಳ ದಾಖಲಾತಿಗಳನ್ನು ಸಲ್ಲಿಸಬೇಕು. ವಯಸ್ಸಿನ ದೃಢೀಕರಣ ಪತ್ರವನ್ನು ಒಂದನೇ ತರಗತಿಗೆ ಸೇರಿದ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗೆ ದಾಖಲಾಗಿರುವ ಜನನ ದಿನಾಂಕವನ್ನು ಶಾಲೆಯಿಂದ ಪಡೆದು ಸಲ್ಲಿಸತಕ್ಕದ್ದು ಅಥವಾ ಶಾಲೆಗೆ ಹೋಗದಿದ್ದಲ್ಲಿ ನ್ಯಾಯಾಲಯದ ನ್ಯಾಯಾಧೀಶರಿಂದ ಜನನ ದಿನಾಂಕದ ಬಗ್ಗೆ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸುವುದು.
ಸರ್ಕಾರದ ವತಿಯಿಂದ ಯಾವುದೇ ಇತರೇ ಸವಲತ್ತುಗಳನ್ನು ಪಡೆಯುತ್ತಿಲ್ಲದಿರುವ ಬಗ್ಗೆ ಸ್ಥಳೀಯ ತಹಶೀಲ್ದಾರ್ವರಿಂದ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿದಾರರ ವಾರ್ಷಿಕ ಆದಾಯ ರೂ. 1 ಲಕ್ಷದ ಮಿತಿಯಲ್ಲಿರಬೇಕು.

ಆಸಕ್ತ ಅರ್ಹ ಕಲಾವಿದರು/ ಸಾಹಿತಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳನ್ನು ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ಅರ್ಜಿಯನ್ನು ಪಡೆದು ದಾಖಲೆಯೊಂದಿಗೆ ಮಾಹಿತಿ ಸಲ್ಲಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...