alex Certify ಗಮನಿಸಿ : ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ ಸಹಕಾರ ತರಬೇತಿ ಸಂಸ್ಥೆಯು 2024 ರ ಜುಲೈ, 01 ರಿಂದ 6 ತಿಂಗಳ ಅವಧಿಯ ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್ ಸಹಕಾರ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದ್ದು, ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಯ ಪಿರಿಯಪಟ್ಟಣ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕುಗಳು ನಮ್ಮ ತರಬೇತಿ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ಸಾಮಾನ್ಯ ಅಭ್ಯರ್ಥಿಗಳಿಗೆ ರೂ.500 ಶಿಷ್ಯವೇತನ ಮತ್ತು ವಿಶೇಷ ನಿರುದ್ಯೋಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.600 ಶಿಷ್ಯವೇತನ ನೀಡಲಾಗುವುದು ಹಾಗೂ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಉಚಿತ ವಸತಿ ಗೃಹದ ವ್ಯವಸ್ಥೆ ಇರುತ್ತದೆ.

ದೂರಶಿಕ್ಷಣ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್’ ಪ್ರವೇಶ ಪ್ರಾರಂಭ ಕೋರ್ಸ್ ಅವಧಿ 6 ತಿಂಗಳು (ಸಹಕಾರ ಸಂಘ/ಸಂಸ್ಥೆ/ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ) ಇತ್ತೀಚಿನ ಕಾಯಿದೆ ತಿದ್ದುಪಡಿ ಅನ್ವಯ ಕೆ.ಸಿ.ಎಸ್ ನಿಯಮ 17(ಎ)(ಬಿ) ಪ್ರಕಾರ ಪದೋನ್ನತಿ ಹೊಂದಬೇಕಾದರೆ ಕಡ್ಡಾಯವಾಗಿ ಡಿ.ಸಿ.ಎಂ ಕೋರ್ಸ್ ಪಡೆಯಬೇಕಾಗುತ್ತದೆ.

ಪ್ರತಿ ವರ್ಷ ಜನವರಿ-ಜೂನ್ ಮತ್ತು ಜುಲೈ-ಡಿಸೆಂಬರ್‍ವರೆಗೆ ಎರಡು ಅಧಿವೇಶನಗಳು ಅಧ್ಯಯನ ಸಾಹಿತ್ಯ ನೀಡಲಾಗುವುದು. 6 ತಿಂಗಳ ಅವಧಿಯಲ್ಲಿ (5+5=10) 02 ದಿನಗಳ ಸಂಪರ್ಕ ತರಗತಿಗಳು, ಹೈಬ್ರಿಡ್ ಮಾದರಿಯಲ್ಲಿ ಆಫ್‍ಲೈನ್ ತರಗತಿಗಳು, ಸಹಕಾರ ವಾರಪತ್ರಿಕೆಯನ್ನು ನೀಡಲಾಗುವುದು.

ತರಬೇತಿ ಪೂರ್ಣಗೊಳಿಸಿದವರಿಗೆ ಅಂಕಪಟ್ಟಿ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ಆನ್‍ಲೈನ್‍ನಲ್ಲಿ ಪ್ರವೇಶಾತಿ ಲಿಂಕ್: www.kscfdcm.co.in ಅರ್ಜಿ ಫಾರಂ ದೊರೆಯುವ ಸ್ಥಳ: ಪ್ರಾಂಶುಪಾಲರು, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮುತ್ತಪ್ಪ ದೇವಸ್ಥಾನದ ಹತ್ತಿರ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ -571201. ಮುಖ್ಯಕಾರ್ಯನಿರ್ವಹಣಾಧಿಕಾರಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಪೆನ್ಷನ್‍ಲೇನ್, ನಗರಸಭೆ ಹಿಂಭಾಗ ರಸ್ತೆ, ಮಡಿಕೇರಿ-571201. ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಾಸನ ಜಿಲ್ಲಾ ಸಹಕಾರ ಯೂನಿಯನ್, ಹಳೇ ಬಸ್ ನಿಲ್ದಾಣದ ಹತ್ತಿರ, ಹಾಸನ-573201.ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 8792628437, 9663153922, 8762925862, 8762110952, 9845318364 ನ್ನು ಸಂಪರ್ಕಿಸಬಹುದು ಎಂದು ಕೆಐಸಿಎಂ ಡಾ.ಆರ್.ಎಸ್.ರೇಣುಕಾ ಅವರು ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...