ಮಿಲಿಟರಿ ಶಾಲೆಗಳಲ್ಲಿ 6 -12 ನೇ ತರಗತಿ ಪ್ರವೇಶಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಶಾಲೆಗಳನ್ನು ರಕ್ಷಣಾ ಸಚಿವಾಲಯ ನಡೆಸುತ್ತದೆ. ಇವು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸಲ್ಪಡುವ ವಸತಿ ಸಾರ್ವಜನಿಕ ಶಾಲೆಗಳಾಗಿವೆ. ಮಿಲಿಟರಿ ಶಾಲೆಗಳು ಇರುವ ಪ್ರದೇಶಗಳು: ಚೈಲ್ (ಹಿಮಾಚಲ ಪ್ರದೇಶ), ಅಜ್ಮೀರ್ (ರಾಜಸ್ಥಾನ), ಧೋಲ್ಪುರ್ (ರಾಜಸ್ಥಾನ), ಬೆಳಗಾವಿ (ಕರ್ನಾಟಕ) ಮತ್ತು ಬೆಂಗಳೂರು (ಕರ್ನಾಟಕ).
ಅರ್ಹತೆ: ಆರನೇ ತರಗತಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಯು ಸರ್ಕಾರಿ / ಸರ್ಕಾರಿ ಮಾನ್ಯತೆ ಪಡೆದ ಶಾಲೆಯಿಂದ 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಒಂಬತ್ತನೇ ತರಗತಿಗೆ ಪ್ರವೇಶ ಪಡೆಯಲು, ವಿದ್ಯಾರ್ಥಿಯು ಸರ್ಕಾರಿ / ಸರ್ಕಾರಿ ಮಾನ್ಯತೆ ಪಡೆದ ಶಾಲೆಯಿಂದ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ: 6ನೇ ತರಗತಿಗೆ ಪ್ರವೇಶ ಪಡೆಯಲು 2025ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ 10 ರಿಂದ 12 ವರ್ಷದೊಳಗಿನವರಾಗಿರಬೇಕು. ಮಾರ್ಚ್ 31, 2025 ಕ್ಕೆ ಅನ್ವಯವಾಗುವಂತೆ 9 ನೇ ತರಗತಿಗೆ ಪ್ರವೇಶ ಪಡೆಯಲು ಅಭ್ಯರ್ಥಿಯ ವಯಸ್ಸು 13 ವರ್ಷಕ್ಕಿಂತ ಕಡಿಮೆ ಇರಬಾರದು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಆಯ್ಕೆ ಪ್ರಕ್ರಿಯೆ: ಸಾಮಾನ್ಯ ಪ್ರವೇಶ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಫಿಟ್ನೆಸ್ ಮತ್ತು ಇತರ ಮೀಸಲಾತಿಗಳನ್ನು ಅನುಸರಿಸಿ
ಪರೀಕ್ಷೆ ಮಾದರಿ: 6 ನೇ ತರಗತಿ: ಬುದ್ಧಿಮತ್ತೆ (50 ಅಂಕಗಳು), ಸಾಮಾನ್ಯ ಜ್ಞಾನ-ಪ್ರಚಲಿತ ವ್ಯವಹಾರಗಳು (50 ಅಂಕಗಳು), ಗಣಿತ (50 ಅಂಕಗಳು), ಇಂಗ್ಲಿಷ್ (50 ಅಂಕಗಳು) ಮತ್ತು ಐದನೇ ತರಗತಿ ಮಟ್ಟದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಂದರ್ಶನಕ್ಕೆ 20 ಅಂಕಗಳು.
9ನೇ ತರಗತಿ: ಇಂಗ್ಲಿಷ್ (50 ಅಂಕ), ಹಿಂದಿ (20 ಅಂಕ), ಸಮಾಜ ವಿಜ್ಞಾನ (30 ಅಂಕ), ಗಣಿತ (50 ಅಂಕ), ವಿಜ್ಞಾನ (50 ಅಂಕ) ಮತ್ತು 8ನೇ ತರಗತಿ. ಸಂದರ್ಶನಕ್ಕೆ 50 ಅಂಕಗಳು.
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 19.09.2024.
ವೆಬ್ಸೈಟ್ : www.rashtriyamilitaryschools.edu.in