alex Certify 45 ಸಾವಿರ ರೂಪಾಯಿ ಆದಾಯ ತಂದುಕೊಡಲಿದೆ 10 ರೂಪಾಯಿಯ ಈ ನೋಟು….! ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

45 ಸಾವಿರ ರೂಪಾಯಿ ಆದಾಯ ತಂದುಕೊಡಲಿದೆ 10 ರೂಪಾಯಿಯ ಈ ನೋಟು….! ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ

ಹಣದ ವ್ಯವಹಾರ ಮಾಡುವ ವೇಳೆಯಲ್ಲಿ ನಾವು ಕೆಲ ವಿಶೇಷ ನೋಟುಗಳ ಬಗ್ಗೆ ಗಮನವನ್ನೇ ಹರಿಸೋದಿಲ್ಲ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಕೆಲ ನೋಟುಗಳು ನಿಮ್ಮನ್ನ ರಾತ್ರಿ ಬೆಳಗಾಗೋದ್ರಲ್ಲಿ ಲಕ್ಷಾಧಿಪತಿಯನ್ನಾಗಿ ಮಾಡಿಬಿಡಬಲ್ಲವು. ಆಶ್ಚರ್ಯ ಎನಿಸಿದ್ರೂ ಇದು ಸತ್ಯ..! ಕೆಲ ವೆಬ್​ಸೈಟ್​ಗಳು ಕೇವಲ 10 ರೂಪಾಯಿ ನೋಟಿಗೆ ನಿಮಗೆ 45 ಸಾವಿರ ರೂಪಾಯಿ ನೀಡುತ್ತಿವೆ. ಅನೇಕರಿಗೆ ನೋಟುಗಳನ್ನ, ನಾಣ್ಯಗಳನ್ನು ಸಂಗ್ರಹ ಮಾಡುವ ಹವ್ಯಾಸ ಇರುತ್ತದೆ. ಇಂತವರು ಹಳೆಯ ಕಾಲದ ನೋಟುಗಳನ್ನ ಸಂಗ್ರಹಿಸಿ ಇಟ್ಟುಕೊಳ್ತಾರೆ. ಆದರೆ ಇಂತಹ ಹವ್ಯಾಸಗಳಿಂದ ನೀವು ಲಕ್ಷಾಧಿಪತಿಯಾಗಬಹುದಾಗಿದೆ.

ದೇಶದಲ್ಲಿರುವ ಕೆಲ ಜನರಿಗೆ ಲಕ್ಕಿ ನಂಬರ್​ ಅಥವಾ ವಿರಳ ಕಲೆಕ್ಷನ್​ ಇರುವ ನೋಟುಗಳನ್ನ ಖರೀದಿ ಮಾಡುವ ಅಭ್ಯಾಸವಿದೆ. ಅನೇಕರು ತಮಗೆ ಅದೃಷ್ಟ ಸಿಗಲಿ ಎಂಬ ಕಾರಣಕ್ಕೆ ಲಕ್ಷ-ಕೋಟಿ ರೂಪಾಯಿ ನೋಡಿ ಅಂತಹ ವಿಶಿಷ್ಟ ಸಂಖ್ಯೆಯ ನೋಟುಗಳನ್ನ ಖರೀದಿ ಮಾಡೋಕೆ ತಯಾರಿರ್ತಾರೆ. ಅದೇ ರೀತಿ 1943ರಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ತಂದ 10 ರೂಪಾಯಿ ನೋಟಿನಲ್ಲಿ ಆಗಿನ ಗವರ್ನರ್​ ಸಿ.ಡಿ ದೇಶಮುಖ್​ರ ಸಹಿ ಇದ್ದು ಈ ನೋಟಿನ ಪ್ರಸ್ತುತ ಮೌಲ್ಯ 45 ಸಾವಿರ ರೂಪಾಯಿ ಆಗಿದೆ.

ಹಳೆಯ 2 ರೂಪಾಯಿ ನೋಟಿಗೂ ಡಿಮ್ಯಾಂಡ್​ ಹೆಚ್ಚಾಗಿದೆ. ವಿಶೇಷವಾಗಿ ಗುಲಾಬಿ ಬಣ್ಣದ ನೋಟುಗಳಿಗಾಗಿ ಜನರು ಹುಡುಕಾಡುತ್ತಿದ್ದಾರೆ. ಇಂತಹ ನೋಟುಗಳ ಮೇಲೆ 786 ಎಂಬ ಸಂಖ್ಯೆಯನ್ನು ಬರೆಯಲಾಗಿದ್ದರೆ ಲಕ್ಷ ರೂಪಾಯಿವರೆಗೆ ಹಣ ನೀಡಿ ಇಂತಹ ನೋಟುಗಳನ್ನ ಖರೀದಿ ಮಾಡಲು ಜನ ಮುಂದೆ ಬರುತ್ತಾರೆ. EBay, ಕಾಯಿನ್​ ಬಜಾರ್​, ಇಂಡಿಯನ್​ ಓಲ್ಡ್​ ಕಾಯಿನ್​ ಹಾಗೂ ಕ್ಲಿಕ್​ ​ ಇಂಡಿಯಾನಂತಹ ಸೈಟ್​ಗಳಲ್ಲಿ ನೀವು ಇಂತಹ ನೋಟುಗಳಿಗೆ ಹುಡುಕಾಟ ನಡೆಸಬಹುದಾಗಿದೆ.

ಕ್ಲಿಕ್​ ಇಂಡಿಯಾ ಸೈಟ್​ನಲ್ಲಿ ನೀವು ನೇರವಾಗಿ ವಾಟ್ಸಾಪ್​​ನಲ್ಲಿ ನೋಟು ಮಾರಾಟ ಮಾಡುವ ಲಿಂಕ್​ ಕಾಣಲಿದ್ದೀರಿ. ಇಲ್ಲಿ ನೀವು ನೋಟು ಮಾರಾಟಗಾರರಾಗಿ ವ್ಯವಹಾರ ನಡೆಸಬಹುದಾಗಿದೆ. ಇದಕ್ಕಾಗಿ ನೀವು ಎಲ್ಲಿಯೂ ಅಲೆದಾಟ ಮಾಡಬೇಕಿಲ್ಲ. ಮಾರಾಟಗಾರನೆಂದು ನೋಂದಾಯಿಸಿದ ಬಳಿಕ ನಿಮ್ಮ ಬಳಿ ಇರುವ ನೋಟುಗಳ ಫೋಟೋವನ್ನ ಹಾಕಿ. ಇದಾದ ಬಳಿಕ ಆಸಕ್ತರು ನಿಮ್ಮನ್ನ ಸಂಪರ್ಕಿಸಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...