ನೋಟರಿಗಳಾಗಿ ನೇಮಕಗೊಳ್ಳುವ ಹಿರಿಯ ವಕೀಲರು ಅಫಿಡವಿಟ್, ಬಾಡಿಗೆ ಒಪ್ಪಂದಗಳಿಗೆ ಪ್ರಮಾಣೀಕರಿಸಿರುವ ವಿಧಾನಗಳ ಬಗ್ಗೆ ಭಾರಿ ಅಸಮಾಧಾನ ಹೊರಹಾಕಿರುವ ಬಾಂಬೆ ಹೈಕೋರ್ಟ್, ಕಾನೂನಿಗೆ ಮಹತ್ತರ ಸುಧಾರಣೆ ತರುವ ಅಗತ್ಯವಿದೆ ಎಂದಿದೆ.
ಸ್ವಲ್ಪ ಹಣ ಪಡೆದು ಯಾವುದೇ ದಾಖಲೆಗಳಿಗೆ ಕಣ್ಣುಮುಚ್ಚಿಕೊಂಡು ನೋಟರಿಗಳ ಸಹಿ ಹಾಕುವ ಪ್ರಕರಣಗಳು ಹೆಚ್ಚಾಗಿವೆ. ಇಂಥ ವ್ಯಾಜ್ಯಗಳು ಹೈಕೋರ್ಟ್ ಎದುರು ಸಾಬೀತಾಗಿವೆ ಕೂಡ ಎಂದು ನ್ಯಾಯಮೂರ್ತಿ ಕಾಠಿಯಾವಲ್ಲಾ ಮತ್ತು ನ್ಯಾ. ಮಿಲಿಂದ್ ಜಾಧವ್ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಈ ಕೂಡಲೇ ನೋಟರೀಸ್ ಕಾಯಿದೆ ಮತ್ತು ಕಾನೂನುಗಳಲ್ಲಿ ಶಿಸ್ತು ರೂಢಿಗೆ ಬರುವಂತಹ ಪರಿಷ್ಕರಣೆ ತಂದು, ವ್ಯವಸ್ಥೆ ಸುಧಾರಣೆಗೊಳ್ಳಲಿ ಎಂದು ಹೈಕೋರ್ಟ್ ಖಡಕ್ ನಿರ್ದೇಶನ ನೀಡಿದೆ. ಈ ಸಂಬಂಧ ಅಗತ್ಯ ಮೇಲುಸ್ತುವಾರಿಗೆ ಕೋರ್ಟ್ ಕಡೆಯಿಂದ ವಕೀಲ ನೌಶರ್ ಕೊಹ್ಲಿ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಲಾಗಿದೆ.
BIG BREAKING: ಭಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್; ಓರ್ವ ಆರೋಪಿ ಪೊಲೀಸ್ ವಶಕ್ಕೆ
ನೋಟರಿಗಳು ದಾಖಲೆಗಳನ್ನು ಸರಿಯಾಗಿ ಗಮನಿಸದೆಯೇ ಪ್ರಮಾಣೀಕರಿಸಿದರೆ ದಾಖಲೆಯ ಕಾನೂನಾತ್ಮಕ ಮಹತ್ವವೇ ಕಡೆಗಣಿಸಿದಂತಾಗಲಿದೆ. ನಕಲಿ ದಾಖಲೆಗಳು ಕೂಡ ಮೌಲ್ಯ ಪಡೆದುಕೊಳ್ಳುತ್ತವೆ. ಅಸಲಿ ದಾಖಲೆ ಸವಾಲು ಹಾಕುತ್ತವೆ. ಇದು ಒಂದು ದೊಡ್ಡ ಜಾಲವಾಗುತ್ತಿರುವ ಬಗ್ಗೆ ಕೋರ್ಟ್ ಗಮನಕ್ಕೆ ಬಂದಿದೆ. ಸಾರ್ವಜನಿಕ ಪಾರ್ಕಿಂಗ್ ಸ್ಥಳದಲ್ಲಿ ನಿಂತುಕೊಂಡು ನೋಟರಿಗಳು ದಾಖಲೆಗಳಿಗೆ ಸಹಿ ಮತ್ತು ಮುದ್ರೆಯೊತ್ತಿರುವುದು ಗಮನಕ್ಕೆ ಬಂದ ನಂತರ ಹೈಕೋಟ್‌ನ ಆತಂಕ ಇನ್ನೂ ಹೆಚ್ಚಿದೆ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರೀಯ ಕಾನೂನು ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಶೀಘ್ರವೇ ಗಮನಹರಿಸಿ, ಕಾಯಿದೆ ತಿದ್ದುಪಡಿಗೆ ಮುಂದಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.