ಬೆಂಗಳೂರು: ಹೆಲ್ಮೆಟ್ ಧರಿಸದಿರುವುದು ಕಾನೂನಿನ ಉಲ್ಲಂಘನೆಯಾಗಿದ್ದರೂ, ಅದು ಪರಿಹಾರವನ್ನು ಪಡೆಯಲು ಯಾರನ್ನೂ ಅನರ್ಹಗೊಳಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಚಿಲಕೂರ್ ಸುಮಲತಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಸಾದತ್ ಅಲಿಖಾನ್ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಖಾನ್ ಅವರು ಮಾರ್ಚ್ 5, 2016 ರಂದು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ರಾಮನಗರ ತಾಲೂಕಿನ ವಡೇರಹಳ್ಳಿ ಗ್ರಾಮಕ್ಕೆ ಬರುತ್ತಿದ್ದಾಗ ಹಿಂದಿನಿಂದ ಅವರ ದ್ವಿಚಕ್ರವಾಹನಕ್ಕೆ ಕಾರ್ ಡಿಕ್ಕಿ ಹೊಡೆದು ಆತನ ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದ್ದವು.
ಪರಿಹಾರಕ್ಕಾಗಿ ರಾಮನಗರದ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದ ಖಾನ್, ತನ್ನ ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಪ್ರಾಸಂಗಿಕ ವೆಚ್ಚಗಳಿಗಾಗಿ 10 ಲಕ್ಷ ರೂ. ಪರಿಹಾರ ಕೋರಿದ್ದರು.
ಸೆಪ್ಟೆಂಬರ್ 24, 2020 ರಂದು ಅಪಘಾತದ ಸಮಯದಲ್ಲಿ ಖಾನ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಹೇಳಿದ್ದು, ನ್ಯಾಯಮಂಡಳಿಯು 5.61 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿತು. ಈ ಆದೇಶವನ್ನು ಪ್ರಶ್ನಿಸಿದ ಖಾನ್, ತಾನು ಮರದ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ತಿಂಗಳಿಗೆ 35,000 ರೂ. ಗಳಿಸುತ್ತಿದ್ದೆ. ಎಂದು ಹೇಳಿದ್ದಾರೆ.
ಅರ್ಜಿದಾರರು ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ದೇಹದ ಪ್ರಮುಖ ಭಾಗಗಳಿಗೆ ಗಾಯಗಳಾಗಿವೆ ಎಂದು ನ್ಯಾಯಮಂಡಳಿ ಗಮನಿಸಿದ್ದರೂ, ಅವರು ಇನ್ನೂ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ವಿಭಾಗೀಯ ಪೀಠ ಹೇಳಿದೆ.
ಗಾಯಗೊಂಡ ವ್ಯಕ್ತಿ ಸ್ವಂತ ನಿರ್ಲಕ್ಷ್ಯವು ಅಪಘಾತ ಅಥವಾ ಗಾಯಗಳಿಗೆ ಕಾರಣವಾಗುತ್ತದೆ. ಮೋಟಾರು ವಾಹನ ಅಪಘಾತಗಳು ನಿರ್ಲಕ್ಷ್ಯದಿಂದ ಸಂಭವಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಗಾಯಗೊಂಡ ವ್ಯಕ್ತಿಗೆ ನೀಡಲಾಗುವ ಪರಿಹಾರವನ್ನು ಅವರ ತಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆ ಮಾಡಬಹುದು. 1988 ರ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 129(ಎ) ಹೆಲ್ಮೆಟ್ ಬಳಸುವುದನ್ನು ಕಡ್ಡಾಯಗೊಳಿಸುತ್ತದೆ. ಆದರೆ ಅದು ಸ್ವಯಂಪ್ರೇರಿತವಾಗಿ ಪರಿಹಾರವನ್ನು ಪಡೆಯುವುದರಿಂದ ಅನರ್ಹಗೊಳಿಸುವುದಿಲ್ಲ ಎಂದು. 6,80,200 ರೂ.ಗೆ ಪರಿಹಾರ ಹೆಚ್ಚಿಸಿದ ನ್ಯಾಯಪೀಠ ತಿಳಿಸಿದೆ.
ಹೆಲ್ಮೆಟ್ ಧರಿಸುವುದು ಸುರಕ್ಷತೆಗೆ ಪ್ರಮುಖವಾಗಿದ್ದರೂ, ಪರಿಹಾರವನ್ನು ಕಡಿಮೆ ಮಾಡುವ ಏಕೈಕ ಅಂಶವಾಗಿರಬಾರದು. ಹಕ್ಕುದಾರರು ಹೆಲ್ಮೆಟ್ ಧರಿಸಲು ವಿಫಲರಾಗಿರುವುದು ಅವರ ಗಾಯಗಳಿಗೆ ಎಷ್ಟರ ಮಟ್ಟಿಗೆ ಕಾರಣವಾಗಿದೆ ಎಂಬುದನ್ನು ನ್ಯಾಯಾಲಯವು ಮೌಲ್ಯಮಾಪನ ಮಾಡುತ್ತದೆ. ಅವರ ನಿರ್ಲಕ್ಷ್ಯ ಕಂಡುಬಂದಲ್ಲಿ ಪರಿಹಾರವನ್ನು ಪ್ರಮಾಣಾನುಗುಣವಾಗಿ ಕಡಿಮೆ ಮಾಡಬಹುದು ಎಂದಿದೆ.