ಮಾರುಕಟ್ಟೆಯಲ್ಲಿ ತನಗಿರುವ ಪ್ರತಿಷ್ಠಿತ ಸ್ಥಾನದ ದುರ್ಬಳಕೆ ಮಾಡಿಕೊಂಡಿರುವ ಪಾರ್ಲೆ ಸಮೂಹವು ಪಾರ್ಲೆ-ಜಿ ಯಂಥ ತನ್ನ ಉತ್ಪನ್ನಗಳನ್ನು ಪೂರೈಸಲು ನಿರಾಕರಿಸುತ್ತಿದೆ ಎಂದು ಆಪಾದಿಸಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಿ2ಬಿ ವಹಿವಾಟು ವ್ಯವಸ್ಥಾಪಕ ಉಡಾನ್ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ದೂರು ಸಲ್ಲಿಸಿದೆ.
ಪುಟ್ಟ ಬಾಲಕಿಯ ಕ್ರೀಡಾಭಿಮಾನಕ್ಕೆ ಮನಸೋತ ನೆಟ್ಟಿಗರು: ವಿಡಿಯೋ ವೈರಲ್
ಭಾರತದಲ್ಲಿ ಗ್ಲೂಕೋಸ್ ಬಿಸ್ಕತ್‌ಗಳ ಅತಿ ದೊಡ್ಡ ಪೂರೈಕೆದಾರನಾದ ಪಾರ್ಲೆಯ ಪಾರ್ಲೆ-ಜಿ ಬಿಸ್ಕತ್ತುಗಳು ಎಲ್ಲಾ ಸಣ್ಣ ಹಾಗೂ ಮಧ್ಯಮ ಗಾತ್ರದ ವಾಪಾರಸ್ಥರಿಗೂ ಅತ್ಯಗತ್ಯವಾಗಿ ಇರಲೇ ಬೇಕಾದ ಸರಕಾಗಿದೆ ಎಂದು ತನ್ನ ದೂರಿನಲ್ಲಿ ತಿಳಿಸಿರುವ ಉಡಾನ್, ಯಾವುದೇ ನ್ಯಾಯಸಮ್ಮತವಾದ ಕಾರಣವಿಲ್ಲದೇ, ಈ ಉತ್ಪನ್ನಗಳನ್ನು ತನಗೆ ನೇರವಾಗಿ ಪೂರೈಕೆ ಮಾಡದೇ ಸತಾಯಿಸುತ್ತಿದೆ ಎಂದು ಆಪಾದಿಸಿದೆ.
ಈ ಕಾರಣದಿಂದಾಗಿ ತಾನು ಪಾರ್ಲೆಯ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಬೇಕಾಗಿ ಬಂದಿದ್ದು, ಪಾರ್ಲೆಯ ಇತರ ವಿತರಕರೊಂದಿಗಿನ ತನ್ನ ಸ್ಪರ್ಧೆಯಲ್ಲಿ ಹಿಂದೇಟು ಆಗುವಂತೆ ಮಾಡಿದೆ ಎಂದು ಉಡಾನ್ ಆರೋಪ ಮಾಡಿದೆ.
ಇದರಿಂದಾಗಿ ಸ್ಫರ್ಧಾತ್ಮಕತೆ ಕುಸಿದು, ತನ್ನ ಖರೀದಿ ವೆಚ್ಚಗಳು ಏರಿಕೆಯಾಗುತ್ತಿವೆ ಎಂದ ಉಡಾನ್, ತನ್ನಿಂದ ಉತ್ಪನ್ನಗಳನ್ನು ಖರೀದಿ ಮಾಡುವ ವರ್ತಕರಿಗೂ ಈ ಬಿಸಿ ತಟ್ಟಿದೆ ಎಂದಿದೆ. ಈ ವಿಚಾರವಾಗಿ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿರುವ ಪಾರ್ಲೆ, ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.