ಮುಂಬೈ: ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಿರುವ ನ್ಯೂಜಿಲೆಂಡ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಭಾರತದ ಅತ್ಯುತ್ತಮ ಬ್ಯಾಟರ್ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.
ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಈ ಮೂವರ ಪೈಕಿ ಯಾರಾದರೂ ಒಬ್ಬರನ್ನು ಹೆಸರಿಸಬಹುದು ಎಂದು ನಿರೀಕ್ಷಿಸಿದ್ದವರಿಗೆ ಅಚ್ಚರಿ ಎನ್ನಿಸುವಂತೆ, ಅವರು ಆಯ್ಕೆ ಮಾಡಿಕೊಂಡಿದ್ದು ಕರುಣ್ ನಾಯರ್ ಅವರನ್ನು….!
“ನಾನು ಈವರೆಗೆ ಕರುಣ್ ನಾಯರ್ ಅವರಿಗೆ ಬೌಲಿಂಗ್ ಮಾಡಿಲ್ಲ. ಆದರೆ, ಯಾವುದೇ ಬಗೆಯ ಎಸೆತವನ್ನೂ ಬಡಿದಟ್ಟುವ ಛಾತಿ ಅವರಿಗಿರುವುದನ್ನು ನೆಟ್ಸ್ ನಲ್ಲಿ ಗಮನಿಸಿದ್ದೇನೆ” ಎಂದು ಕರುಣ್ ನಾಯರ್ ಅವರನ್ನು ಬೌಲ್ಟ್ ಶ್ಲಾಘಿಸಿದ್ದಾರೆ. ಈ ಇಬ್ಬರೂ ಈಗ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವುದು ವಿಶೇಷ.
BIG BREAKING: ದೆಹಲಿಯಲ್ಲಿ ಸಂಚಲನದ ಬೆಳವಣಿಗೆ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
ಸದ್ಯಕ್ಕೆ ಭಾರತ ತಂಡವನ್ನು ಯಾವುದೇ ಮಾದರಿಯಲ್ಲಿ ಪ್ರತಿನಿಧಿಸದ ಆಟಗಾರನೊಬ್ಬನನ್ನು ಬೌಲ್ಟ್ ಹೆಸರಿಸಿದ್ದು ಹುಬ್ಬೇರಿಸಿದೆ. ಕರುಣ್ ಕೊನೆಯದಾಗಿ ಭಾರತದ ಪರ ಆಡಿದ್ದು 2017 ರಲ್ಲಿ; ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ. ಭಾರತದ ಪರ ಅವರು ಆರು ಟೆಸ್ಟ್ ಹಾಗೂ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ, ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ತ್ರಿಶತಕ ಬಾರಿಸಿದ ದಾಖಲೆಯನ್ನು ಸೆಹ್ವಾಗ್ ಜತೆಗೆ ಹಂಚಿಕೊಂಡಿದ್ದಾರೆ. ಅವರ ತ್ರಿಶತಕ (ಇಬ್ಬರೂ ಸೇರಿ ಆಜೇಯ 303) ಇಂಗ್ಲೆಂಡ್ ವಿರುದ್ಧ ಬಂದಿತ್ತು. ಆ ಪಂದ್ಯವನ್ನು ಭಾರತ 75 ರನ್ಗಳಿಂದ ಗೆದ್ದುಕೊಂಡಿತ್ತು.