alex Certify ಬಂಗಾರ-ಬೆಳ್ಳಿಯಷ್ಟೇ ಅಲ್ಲ ಧನತೇರಸ್ ದಿನ ಖರೀದಿಸಿ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಗಾರ-ಬೆಳ್ಳಿಯಷ್ಟೇ ಅಲ್ಲ ಧನತೇರಸ್ ದಿನ ಖರೀದಿಸಿ ಈ ವಸ್ತು

ದೀಪಾವಳಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಸಮುದ್ರ ಮಂಥನದ ವೇಳೆ  ಧನವಂತರಿ ದೇವಿ ಪ್ರಕಟವಾಗಿದ್ದಳಂತೆ. ಇದೇ ಕಾರಣಕ್ಕೆ ಧನವಂತರಿ ಪೂಜೆ ಮಾಡಲಾಗುತ್ತದೆ. ಈ ದಿನ ದೇವಿ ಆರಾಧನೆ ಮಾಡಿದ್ರೆ ಸುಖ-ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಈ ದಿನ ಕುಬೇರನ ಪೂಜೆಯನ್ನೂ ಮಾಡಲಾಗುತ್ತದೆ. ಯಾವ ಮುಹೂರ್ತದಲ್ಲಿ ಬಂಗಾರ-ಬೆಳ್ಳಿ ಖರೀದಿ ಮಾಡಿದ್ರೆ ಶುಭ ಎಂಬುದನ್ನು ಈಗಾಗ್ಲೇ ಹೇಳಲಾಗಿದೆ. ಆದ್ರೆ ಈ ದಿನ ಬೆಳ್ಳಿ-ಬಂಗಾರವೊಂದೇ ಅಲ್ಲ ಇನ್ನು ಕೆಲ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ಸುಖ-ಶಾಂತಿ, ಸಂತೋಷವನ್ನು ತರಬಹುದು.

ಉಪ್ಪು : ಧನತೇರಸ್ ದಿನ ಉಪ್ಪನ್ನು ಮನೆಗೆ ತರುವುದ್ರಿಂದ ಧನಾಗಮನವಾಗುತ್ತದೆ ಎಂದು ನಂಬಲಾಗಿದೆ.

ಪಾತ್ರೆ: ಈ ದಿನ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಯನ್ನು ಮನೆಗೆ ತನ್ನಿ.

ಪೊರಕೆ : ಧನತೇರಸ್ ದಿನ ಪೊರಕೆಯನ್ನು ಮನೆಗೆ ತಂದಲ್ಲಿ ನಕಾರಾತ್ಮಕ ಶಕ್ತಿ ಮನೆಯಿಂದ ದೂರ ಹೋಗುತ್ತದೆ ಎಂದು ನಂಬಲಾಗಿದೆ.

ರುದ್ರಾಕ್ಷಿ : ಧನತೇರಸ್ ದಿನ ರುದ್ರಾಕ್ಷಿಯನ್ನು ಖರೀದಿ ಮಾಡಿ ಮನೆಗೆ ತರುವುದ್ರಿಂದ ಕಷ್ಟ ದೂರವಾಗುತ್ತದೆ.

ಲಕ್ಷ್ಮಿ-ಗಣೇಶನ ಮೂರ್ತಿ : ಈ ದಿನ ಲಕ್ಷ್ಮಿ ಅಥವಾ ಗಣೇಶನ ಮೂರ್ತಿಯನ್ನು ಅವಶ್ಯವಾಗಿ ಖರೀದಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...