ಸಾಮಾನ್ಯವಾಗಿ ಮದುವೆಯ ಮೆಹಂದಿಯಲ್ಲಿ ವಧು-ವರರು ತಮ್ಮ ಫಿಯಾನ್ಸಿಯ ಮೊದಲಕ್ಷರಗಳನ್ನು ಹಾಕಲು ಇಷ್ಟಪಡುತ್ತಾರೆ. ಆದರೆ, ಇಲ್ಲೊಬ್ಬ ವಧು ತಾನು ಎಲ್ಲರಿಗಿಂತ ಸ್ವಲ್ಪ ಡಿಫರೆಂಟು ಅಂತಾ ತೋರಿಸಿಕೊಟ್ಟಿದ್ದಾಳೆ.
ಹೌದು, ವಧುವೊಬ್ಬಳು ಎಲ್ಲರಂತೆ ತನ್ನ ಗಂಡನಾಗುವವನ ಹೆಸರನ್ನು ಮದರಂಗಿಯಲ್ಲಿ ಹಾಕಲು ಇಷ್ಟಪಡದೆ, ವಿಭಿನ್ನವಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಆಕೆ ತನ್ನ ವರನಿಗೆ ತನ್ನ ಪ್ರೀತಿಯನ್ನು ಅನನ್ಯ ರೀತಿಯಲ್ಲಿ ಹೇಳಲು ಬಯಸಿದ್ದಳು. ತನ್ನ ಮೆಹಂದಿಯಲ್ಲಿ ತನ್ನ ಗಂಡನ ಹೆಸರನ್ನು ಬರೆಯಲು ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ, ವಿಶೇಷವಾದ ವರ್ಣಚಿತ್ರಗಳನ್ನು ಮೆಹಂದಿ ಮೂಲಕ ಬಿಡಿಸಿದ್ದಾಳೆ.
ವಧು ಅಂಜಲಿ ಎಂಬಾಕೆ ವಿನ್ಸೆಂಟ್ ವ್ಯಾನ್ ಗಾಗ್ ಅವರ ದಿ ಸ್ಟ್ಯಾರಿ ನೈಟ್ ಅನ್ನು ಒಳಗೊಂಡಿರುವ ತನ್ನ ನೆಚ್ಚಿನ ವರ್ಣಚಿತ್ರಗಳನ್ನು ಬಿಡಿಸುವಂತೆ ತನ್ನ ಮೆಹಂದಿ ಕಲಾವಿದನನ್ನು ಕೇಳಿಕೊಂಡಿದ್ದಾಳೆ. ಆಕೆ ಇಷ್ಟಪಟ್ಟಂತೆ ಮದರಂಗಿ ಡಿಸೈನರ್ ಅದ್ಭುತವಾಗಿ ವರ್ಣಚಿತ್ರವನ್ನು ರಚಿಸಿದ್ದು, ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಅಂಜಲಿ ತನ್ನ ಮೆಹಂದಿ ಮತ್ತು ಪ್ರಸಿದ್ಧ ವರ್ಣಚಿತ್ರಗಳ ವಿವರಣೆಯನ್ನು ತೋರಿಸುವುದನ್ನು ನೋಡಬಹುದು. ಇದು ಗುಸ್ತಾವ್ ಕ್ಲಿಮ್ಟ್ ಅವರ ಕಿಸ್, ಹೊಕುಸೈ ಅವರ ದಿ ಗ್ರೇಟ್ ವೇವ್ ಆಫ್ ಕನಗಾವಾ ಮತ್ತು ಪ್ಯಾಬ್ಲೋ ಪಿಕಾಸೊ ಅವರ ಫೆಮ್ಮೆ ಔ ಕೊಲಿಯರ್ ಜಾನ್ ಅನ್ನು ಒಳಗೊಂಡಿದೆ. ಇಂಟರ್ನೆಟ್ ಈ ವಿಶಿಷ್ಟವಾದ ಮೆಹಂದಿ ವಿನ್ಯಾಸವನ್ನು ಇಷ್ಟಪಟ್ಟಿದೆ.