ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಸಹ ಆಗಿರುವ ರಾಹುಲ್ ದ್ರಾವಿಡ್ ಈ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
2019ರಲ್ಲಿ ಎನ್‌ಸಿಎ ಮುಖ್ಯಸ್ಥರಾಗಿ ಒಮ್ಮೆ ಕಾರ್ಯ ನಿರ್ವಹಿಸಿರುವ ದ್ರಾವಿಡ್ ಮತ್ತೊಮ್ಮೆ ಆಯ್ಕೆ ಬಯಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಇನ್ನೆರಡು ವರ್ಷಗಳ ಕಾಲ ತಮ್ಮ ಈ ಪಾತ್ರವನ್ನು ವಿಸ್ತರಿಸಲು ದ್ರಾವಿಡ್ ಬಯಸುತ್ತಿದ್ದಾರೆ.
ಉಚಿತ ಸಿಲಿಂಡರ್: ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
ಭಾರತ ಅಂಡರ್-19 ಹಾಗೂ ಭಾರತ-ಎ ತಂಡಗಳ ಮುಖ್ಯ ಕೋಚ್ ಆಗಿ ಕೆಲಸ ಮಾಡಿರುವ ದ್ರಾವಿಡ್ ಇತ್ತೀಚೆಗೆ ಶ್ರೀಲಂಕಾ ಪ್ರವಾಸಕ್ಕೆ ಹೊರಟಿದ್ದ ಭಾರತ ತಂಡದ ಕೋಚ್ ಸಹ ಆಗಿದ್ದರು.
ಒಂದು ವೇಳೆ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸದೇ ಇದ್ದಲ್ಲಿ ಟೀಂ ಇಂಡಿಯಾ ತಂಡದ ಫುಲ್ ಟೈಮ್ ಕೋಚ್ ಹುದ್ದೆಗೆ ಪ್ರಯತ್ನಿಸುವ ಸಾಧ್ಯತೆ ಇದೆ. ನವೆಂಬರ್‌ನಲ್ಲಿ ಕೋಚ್ ರವಿ ಶಾಸ್ತ್ರಿ ಅವಧಿ ಮುಗಿಯಲಿದ್ದು, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡದೇ ಇದ್ದಲ್ಲಿ ಶಾಸ್ತ್ರಿ ಮರು ಆಯ್ಕೆಯ ಮಾತುಗಳು ಉದ್ಭವಿಸುವ ಸಾಧ್ಯತೆಯೇ ಇಲ್ಲ ಎನ್ನಲಾಗುತ್ತಿದೆ.