ಶಿಮ್ಲಾ ಎಂದರೆ ಸಾಕು ಅದು ಭೂಲೋಕದ ಸ್ವರ್ಗ. ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಅದೇ ರೀತಿ, ನಾರ್ವೆಯ ರಾಯಭಾರಿ ಎರಿಕ್ ಸೊಲ್ಹೆಮ್ ಅವರು ಈ ಶಿಮ್ಲಾವನ್ನು ನೋಡಿ ಮಂದಸ್ಮಿತ ಮತ್ತು ಸಮ್ಮೋಹನಗೊಂಡಿದ್ದಾರೆ.
ಇತ್ತೀಚೆಗೆ ಶಿಮ್ಲಾ ಪ್ರವಾಸ ಕೈಗೊಂಡಿದ್ದ ಅವರು, ಆ ಸ್ಥಳದ ಹಚ್ಚಹಸಿರು ಇರುವ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು. ಅದನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, `ಅತ್ಯದ್ಭುತವಾದ ಭಾರತ’ ಎಂಬ ಉದ್ಘಾರದೊಂದಿಗೆ ಹೃದಯದ ಎಮೋಜಿಯನ್ನು ಹಾಕಿ ಕೊಂಡಾಡಿದ್ದಾರೆ. ಇದು ಯೂರೋಪ್ ಅಲ್ಲ, ಆದರೆ ಸ್ವಚ್ಛ ಮತ್ತು ಹಸಿರಿನ ಶಿಮ್ಲಾ ಎಂದಿದ್ದಾರೆ.
ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಬಳಕೆದಾರರೊಬ್ಬರು, ವಿಶ್ವಕ್ಕೆ ಭಾರತದ ಸೌಂದರ್ಯವನ್ನು ತೋರಿಸುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ.
BIG NEWS: ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ; ರಾಜಕೀಯ ನಿಂತ ನೀರಲ್ಲ……ಸಹನೆ, ಸೌಜನ್ಯದಿಂದ ಇರುವಂತೆ ಬೆಂಬಲಿಗರಿಗೆ ಮನವಿ ಮಾಡಿದ ಬಿ.ವೈ. ವಿಜಯೇಂದ್ರ
ಎರಿಕ್ ಸೊಲ್ಹೆಮ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಭಾರತದ ವಿವಿಧ ರಾಜ್ಯಗಳ ಒಂದಿಲ್ಲೊಂದು ಸುಂದರವಾದ ಫೋಟೋವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕರ್ನಾಟಕದ ಉಡುಪಿಯ ಚಿತ್ರವನ್ನು ಹಂಚಿಕೊಂಡು, ಇದು `the world’s most beautiful cycling route’ ಎಂದು ಬಣ್ಣಿಸಿದ್ದರು.
ಕಳೆದ ವರ್ಷ ಲಡಾಕ್ ನ ಚಿತ್ರವನ್ನು ಹಂಚಿಕೊಂಡು ಅದಕ್ಕೆ ‘Magical Night of Ladakh’ ಎಂದು ಶೀರ್ಷಿಕೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.