ಮನರಂಜನೆ, ಹಾಸ್ಯದ ಜತೆಗೆ ಸದಭಿರುಚಿಯ, ಸಮಾಜಮುಖಿ ಸಿನಿಮಾಗಳ ಮೂಲಕ, ಅದರಲ್ಲೂ ಯಾವ ಸ್ಟಾರ್‌ಗಿರಿಯ ಅಹಂಕಾರ ಇಲ್ಲದೆ ವರ್ಷದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನಗೆದ್ದಿರುವ ಬಾಲಿವುಡ್ ನಟ ಅಕ್ಷ ಯ್ ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ’ಬಚ್ಚನ್ ಪಾಂಡೆ’ ಬಿಡುಗಡೆಗೆ ಸಿದ್ಧವಾಗಿದೆ. ಇದರ ಮಧ್ಯೆಯೇ ತಾನೇಕೆ ಇಷ್ಟೊಂದು ಸಿನಿಮಾಗಳಲ್ಲಿ ನಟಿಸುತ್ತೇನೆ, ಅನುದಿನವೂ ಏಕೆ ಕೆಲಸ ಮಾಡುತ್ತೇನೆ ಎಂಬ ಕುರಿತು ಅಕ್ಷಯ್ ಮಾತನಾಡಿದ್ದಾರೆ.
’ನಾನು ಜೀವನದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ನನ್ನ ಬಳಿ ಈಗ ಸಾಕಷ್ಟು ಹಣವಿದೆ. ಉತ್ತಮ ಜೀವನ ಸಾಗಿಸುತ್ತಿದ್ದೇನೆ. ಆದರೂ ನಾನು ಸಿನಿಮಾಗಳಲ್ಲಿ ನಟಿಸಲು, ವಾರದ ಆರು ದಿನ ದುಡಿದು, ಭಾನುವಾರ ರಜೆ ತೆಗೆದುಕೊಳ್ಳುತ್ತೇನೆ. ನನಗೆ ಬೆಳಗ್ಗೆ ಎದ್ದ ತಕ್ಷಣ ಮಾಡಲು ಕೆಲಸ ಇರಬೇಕು. ಅಷ್ಟಕ್ಕೂ, ನಾನೀಗ ಸಿನಿಮಾಗಳಲ್ಲಿ ನಟಿಸುತ್ತಿರುವುದು ದುಡ್ಡಿಗಾಗಿ ಅಲ್ಲ, ಸಿನಿಮಾ ಮೇಲಿನ ಪ್ರೀತಿ ಹಾಗೂ ಮೋಹಕ್ಕಾಗಿ ನಟಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಆತ್ಮ ನಿರ್ಭರ ಭಾರತ ಯೋಜನೆಯಡಿ ಸುವರ್ಣಾವಕಾಶ: ಆಹಾರ ಸಂಸ್ಕರಣೆ ಉದ್ದಿಮೆದಾರರಿಗೆ ಸಹಾಯಧನ ಶೇ.50ಕ್ಕೆ ಏರಿಕೆ
’ನನಗೆ ಮಾಡಲು ಕೆಲಸ ಇಲ್ಲದಿದ್ದರೆ ಬೇಸರ ಎನಿಸುತ್ತದೆ. ಏನನ್ನೋ ಕಳೆದುಕೊಂಡ ಭಾವನೆ ಮೂಡುತ್ತದೆ. ಕೆಲಸ ಮಾಡುತ್ತಿದ್ದರೇನೇ ನಾನು ಖುಷಿಯಿಂದ ಇರುತ್ತೇನೆ. ಅಷ್ಟಕ್ಕೂ, ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿಯೂ ಹಣದ ಅನಿವಾರ್ಯಕ್ಕಾಗಿ, ಉದ್ಯೋಗದ ಬದ್ಧತೆಗಾಗಿ ಕೆಲಸ ಮಾಡಿದ್ದಾರೆ. ಹೀಗೆ ನಾನು ಸಹ ಯಾವಾಗಲೂ ಕೆಲಸ ಮಾಡಲು ಬಯಸುತ್ತೇನೆ. ನಾನು ನಟನಾದ ಕಾರಣ ಹಾಗೂ ನಿತ್ಯ ಕೆಲಸ ಮಾಡಬೇಕು ಎಂಬ ಹಂಬಲ ಇರುವ ಕಾರಣ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲೂ ಅಕ್ಷಯ್ ಕುಮಾರ್ ಅವರು ನಟಿಸಿದ ಬೆಲ್ ಬಾಟಮ್, ಸೂರ್ಯವಂಶಿ, ಅಂತರಂಗಿ ರೆ ಸಿನಿಮಾಗಳು ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಈಗ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.