ಭಾರತೀಯರು ಪ್ರಪಂಚದ ಮೂಲೆ ಮೂಲೆಯಲ್ಲೂ ಇದ್ದಾರೆ. ಅದರಲ್ಲೂ ಕೆನಡಾ ಮತ್ತುಅಮೆರಿಕದಂತಹ ದೇಶಗಳಲ್ಲಿ ಭಾರತೀಯರ ಸಂಖ್ಯೆ ಸಾಕಷ್ಟಿದೆ. ಆದರೆ ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ ಒಬ್ಬನೇ ಒಬ್ಬ ಭಾರತೀಯ ಕೂಡ ವಾಸವಾಗಿಲ್ಲ. ಭಾರತೀಯ ಸಮುದಾಯಗಳು ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿವೆ, ಆದರೆ ಒಬ್ಬ ಭಾರತೀಯನೂ ನೆಲೆಸದ ವಿಶ್ವದ 5 ದೇಶಗಳ ಬಗ್ಗೆ ತಿಳಿಯೋಣ.
ವ್ಯಾಟಿಕನ್ ಸಿಟಿ
ರೋಮ್‌ನ ಮಧ್ಯಭಾಗದಲ್ಲಿರುವ ವ್ಯಾಟಿಕನ್ ನಗರವು ವಿಶ್ವದ ಅತ್ಯಂತ ಚಿಕ್ಕ ಸ್ವತಂತ್ರ ದೇಶವಾಗಿದೆ. ಈ ದೇಶವು ಕ್ಯಾಥೋಲಿಕ್ ಚರ್ಚ್‌ನ ಆಧ್ಯಾತ್ಮಿಕ ಕೇಂದ್ರವೂ ಹೌದು. ಪ್ರತಿ ವರ್ಷ ಭಾರತೀಯ ಪ್ರವಾಸಿಗರು ವ್ಯಾಟಿಕನ್ ನಗರಕ್ಕೆ ಭೇಟಿ ನೀಡುತ್ತಾರೆ, ಆದರೆ ಇಲ್ಲಿಯವರೆಗೆ ಯಾವುದೇ ಭಾರತೀಯರು ಇಲ್ಲಿ ನೆಲೆಸಿಲ್ಲ.
ಸ್ಯಾನ್ ಮರಿನೋ
ಇಟಲಿಯ ಅಪೆನ್ನೈನ್ ಪರ್ವತಗಳಲ್ಲಿ ನೆಲೆಗೊಂಡಿರುವ ಸ್ಯಾನ್ ಮರಿನೋ ವಿಶ್ವದ ಅತ್ಯಂತ ಹಳೆಯ ಗಣರಾಜ್ಯಗಳಲ್ಲಿ ಒಂದಾಗಿದೆ. ಈ ದೇಶವು ತನ್ನ ಭವ್ಯವಾದ ವಾಸ್ತುಶಿಲ್ಪ, ಸುಂದರವಾದ ಭೂದೃಶ್ಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಪ್ರವಾಸಿಗರು ಸ್ಯಾನ್ ಮರಿನೋಗೆ ಭೇಟಿ ನೀಡಲು ಬರುತ್ತಾರೆ, ಆದರೆ ಒಬ್ಬ ಭಾರತೀಯನೂ ಇಲ್ಲಿ ವಾಸ ಮಾಡಿಲ್ಲ.
ಬಲ್ಗೇರಿಯಾ
ಆಗ್ನೇಯ ಯುರೋಪ್‌ನಲ್ಲಿರುವ ಬಲ್ಗೇರಿಯಾ ಬಹಳ ಸುಂದರವಾದ ದೇಶ. ಮರಳು ಕಡಲತೀರಗಳು ಮತ್ತು ಕಪ್ಪು ಸಮುದ್ರ ಇಲ್ಲಿನ ಪ್ರಮುಖ ಆಕರ್ಷಣೆ. ಸೌಂದರ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಈ ದೇಶ ಪ್ರಸಿದ್ಧವಾಗಿದೆ. ಅದರೆ ಈ ದೇಶದಲ್ಲಿ ಕೂಡ ಭಾರತೀಯರು ವಾಸವಾಗಿಲ್ಲ.
ತುವಾಲು
ಪೆಸಿಫಿಕ್ ಮಹಾಸಾಗರದ ದೂರದ ಪ್ರದೇಶಗಳಲ್ಲಿ ನೆಲೆಗೊಂಡಿರುವ ತುವಾಲು, ವಿಶ್ವದ ಅತ್ಯಂತ ಚಿಕ್ಕ ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಒಂಬತ್ತು ಹವಳದ ಅಟಾಲ್‌ಗಳಿಂದ ಕೂಡಿರುವ ತುವಾಲು ತನ್ನ ಪ್ರಾಚೀನ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಭಾರತೀಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ, ಆದರೆ ಯಾವುದೇ ಭಾರತೀಯರು ಇಲ್ಲಿ ನೆಲೆಸಿಲ್ಲ.
ಪಾಕಿಸ್ತಾನ
ಭಾರತದಿಂದ ಬೇರ್ಪಟ್ಟು 77 ವರ್ಷಗಳ ಹಿಂದೆ ಪಾಕಿಸ್ತಾನ ರೂಪುಗೊಂಡಿತ್ತು. ಆದರೆ ಇದುವರೆಗೂ ಒಬ್ಬ ಭಾರತೀಯನೂ ಇಲ್ಲಿ ನೆಲೆಸಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ಪರಿಸ್ಥಿತಿ ಇದೆ. ಹಾಗಾಗಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಹೊರತಾಗಿಯೂ, ಯಾವುದೇ ಭಾರತೀಯರು ಪಾಕಿಸ್ತಾನದಲ್ಲಿ ವಾಸಿಸಲು ಬಯಸುವುದಿಲ್ಲ.