ಕೋವಿಡ್ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು.
ಆ ನಗರದಲ್ಲಿ ಕಳೆದ ತಿಂಗಳು ಒಂದೇ ಒಂದು ಕಾರು ಮಾರಾಟವಾಗಿಲ್ಲ. ನಗರದ 25 ಮಿಲಿಯನ್ ನಿವಾಸಿಗಳಿದ್ದು, ಬಹುಪಾಲು ಜನರು ಹೆಚ್ಚಾಗಿ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ.
ಶಾಂಘೈ ನಗರದ ಬಹುತೇಕ ಎಲ್ಲಾ ಡೀಲರ್‌ಶಿಪ್‌ಗಳನ್ನು ಮುಚ್ಚಲಾಗಿದೆ. ಆಟೋಮೊಬೈಲ್ ಸೇಲ್ಸ್ ಅಸೋಸಿಯೇಷನ್ ಸೋಮವಾರ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದೆಯಲ್ಲದೇ ಶೂನ್ಯ ಮಾರಾಟದ ಅಂಕಿಅಂಶವನ್ನೂ ಬಹಿರಂಗಮಾಡಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ 26,311 ವಾಹನ ಮಾರಾಟವಾಗಿತ್ತು. ಸುಮಾರು ಮುನ್ನೂರು ಕಂಪನಿಗಳು ವಾಹನ ಮಾರಾಟ ಮಾಡಿದ್ದವು.
ರಾಷ್ಟ್ರವ್ಯಾಪಿ, ಕಾರು ಮಾರಾಟವು ಏಪ್ರಿಲ್‌ನಲ್ಲಿ ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ, ಇದು ಸುಮಾರು ಶೇ.36 ರಷ್ಟು ಕಡಿಮೆಯಾಗಿದೆ ಒಂದು ವರ್ಷದ ಹಿಂದೆ 1.06 ಮಿಲಿಯನ್ ಯುನಿಟ್‌ಗಳು, ಮಾರಾಟವಾಗಿತ್ತೆಂದು ಚೀನಾ ಪ್ಯಾಸೆಂಜರ್ ಕಾರ್ ಅಸೋಸಿಯೇಷನ್ ಕಳೆದ ವಾರ ಡೇಟಾ ಬಿಡುಗಡೆ ಮಾಡಿತು.