
ಶೌಚಾಲಯದಲ್ಲಿ 7 ಅಡಿ ಉದ್ದದ ಮೊಸಳೆ ನೋಡಿದ ಉತ್ತರಪ್ರದೇಶದ ಜನ ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಫಿರೋಜ್‌ಪುರ ಜಿಲ್ಲೆಯ ನಾಗ್ಲಾ ಪಾಸಿ ಗ್ರಾಮದಲ್ಲಿನ ಕಟ್ಟಡವೊಂದರ ಶೌಚಾಲಯದಲ್ಲಿ 7 ಅಡಿ ಉದ್ದದ ಮೊಸಳೆಯನ್ನು ಕಂಡು ಗ್ರಾಮಸ್ಥರು ಭಯಗೊಂಡರು.
ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದು, ಮಾಲೀಕರು ಸಹಾಯಕ್ಕಾಗಿ ಅರಣ್ಯ ಇಲಾಖೆಗೆ ಕರೆ ಮಾಡಿದರು. ಅವರು ಪ್ರಾಣಿ ರಕ್ಷಣೆಯ ಎನ್ ಜಿಒ ಸಹಾಯ ಪಡೆದರು. ಎನ್‌ಜಿಒದ ಕನಿಷ್ಠ ನಾಲ್ವರು ಸದಸ್ಯರ ತಂಡವು ಎಲ್ಲಾ ಅಗತ್ಯ ಸಲಕರಣೆಗಳೊಂದಿಗೆ ಸ್ಥಳಕ್ಕೆ ತಲುಪಿ ಸುದೀರ್ಘ ಕಾರ್ಯಾಚರಣೆಯ ನಂತರ ಮೊಸಳೆಯನ್ನು ಸುರಕ್ಷಿತವಾಗಿ ಶೌಚಾಲಯದಿಂದ ಹೊರತೆಗೆಯಿತು.
ಸುಮಾರು 2 ಗಂಟೆಗಳ ಕಾಲ ದೈತ್ಯ ಮೊಸಳೆಯನ್ನು ರಕ್ಷಿಸಿದ ನಂತರ ಅದನ್ನು ನೀರಿಗೆ ಬಿಡಲಾಗಿದ್ದು,
ಮೊಸಳೆ ಸಮೀಪದ ಕೊಳದಿಂದ ನುಸುಳಿರಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.