ನಾರ್ವೆಯಲ್ಲಿ ಫೈಜರ್ ಲಸಿಕೆ ಪಡೆದುಕೊಂಡ 23 ಮಂದಿ ಮೃತಪಟ್ಟಿದ್ದು, ಅನೇಕರಿಗೆ ಅಡ್ಡಪರಿಣಾಮ ಉಂಟಾಗಿದೆ. ನಾರ್ವೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಈ ಬಗ್ಗೆ ಮಾಹಿತಿ ನೀಡಿ, ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.
ಫೈಜರ್ ಬಯೋಟೆಕ್ ಕೊರೋನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಿದ ಲಸಿಕೆ ಪಡೆದುಕೊಂಡ 23 ಜನ ಮೃತಪಟ್ಟಿದ್ದು, ಅನೇಕರಿಗೆ ಅಡ್ಡ ಪರಿಣಾಮ ಉಂಟಾಗಿದೆ. ನಾರ್ವೆ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಅಡ್ಡಪರಿಣಾಮದಿಂದ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ 23 ವೃದ್ಧರು ಮೃತಪಟ್ಟಿದ್ದಾರೆ. ಅವರಿಗೆ ಲಸಿಕೆ ಪ್ರತಿಕೂಲ ಪರಿಣಾಮವನ್ನು ಬೀರಿದೆ ಎಂದು ಹೇಳಲಾಗಿದೆ. ಫೈಜರ್ ಲಸಿಕೆ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಅಮೆರಿಕದಲ್ಲಿಯೂ ಇದನ್ನು ಬಳಸಲಾಗುತ್ತಿದೆ. ನಾರ್ವೆಯಲ್ಲಿ 30 ಸಾವಿರಕ್ಕೂ ಅಧಿಕ ಜನರಿಗೆ ಕಳೆದ ಡಿಸೆಂಬರ್ನಲ್ಲಿ ಲಸಿಕೆ ನೀಡಲಾಗಿದೆ. 23 ಮಂದಿ ವೃದ್ಧರು ಸಾವನ್ನಪ್ಪಿದ ನಂತರ ನಾರ್ವೆ ಆಡಳಿತ ಯಾವುದೇ ರೋಗಗಳಿಲ್ಲದವರಿಗೆ ಮಾತ್ರ ಲಸಿಕೆ ನೀಡಲು ಮುಂದಾಗಿದ್ದು, ಅಡ್ಡ ಪರಿಣಾಮಗಳ ಬಗ್ಗೆ ನಿಗಾ ವಹಿಸಲಾಗಿದೆ.