ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾನೆ. ಆತನ ವಿಚಿತ್ರ ಸ್ವಭಾವ, ಜನರನ್ನು ಗೋಳು ಹೊಯ್ದುಕೊಳ್ಳುವ ರೀತಿ, ಸೇನಾಧಿಕಾರಿಗಳ ಗೌಪ್ಯ ಹತ್ಯೆ ಸಂಬಂಧ ಆತ ಸುದ್ದಿಯಲ್ಲಿಇದ್ದೇ ಇರುತ್ತಾನೆ.
ಈ ಬಾರಿ ಆತನ ಖಾಸಗಿ ಶೌಚಾಲಯದ ಕುರಿತು ವಿಶೇಷ ಹಾಗೂ ಭಯಹುಟ್ಟಿಸುವ ಸುದ್ದಿ ಬಯಲಾಗಿದೆ. ತನ್ನ ಸಂಚಾರಕ್ಕಾಗಿ ಕಿಮ್ ಬಳಸುವುದು ಮರ್ಸಿಡಿಸ್ ಬೆಂಜ್ ಕಂಪನಿಯ ಸಾಲು ಸಾಲು ಕಾರುಗಳನ್ನು. ಅವುಗಳಲ್ಲಿ ಹಲವು ಖಾಲಿ ಇರುತ್ತವೆ. ವೈರಿಗಳಿಗೆ ತಾನು ಯಾವ ಕಾರಲ್ಲಿ ಕುಳಿತಿದ್ದೇನೆ ಎಂದು ತಿಳಿಯಬಾರದು ಎಂದು ಬೆಂಜ್ ಕಾರುಗಳನ್ನು ಒಂದೇ ರೀತಿಯಾಗಿ ಇರಿಸಿದ್ದಾನೆ. ಒಂದೇ ನಂಬರ್ ಪ್ಲೇಟ್, ಒಂದೇ ರೀತಿಯ ಬಣ್ಣದ ಸುಮಾರು 10ಕ್ಕೂ ಹೆಚ್ಚು ಕಾರುಗಳಿವೆ.
ಆದರೆ, ವಿಚಾರದ ಅದಲ್ಲ. ಈ ಸಾಲುಸಾಲು ಕಾರುಗಳ ಪೈಕಿ ಒಂದರಲ್ಲಿ ಕಿಮ್ ಬಳಸುವ ಖಾಸಗಿ ಟಾಯ್ಲೆಟ್ ಇದೆ ! ಹೌದು, ಕಾರನ್ನೇ ಶೌಚಾಲಯದ ರೀತಿಯಲ್ಲಿ ಮಾರ್ಪಡಿಸಿದ್ದಾನೆ. ಇದರಲ್ಲಿ ತನ್ನ ಮಲ-ಮೂತ್ರಗಳನ್ನು ಶೇಖರಿಸಿಡುವ ಹುಚ್ಚು ಚಟ ಈತನದ್ದು. ಅಪ್ಪಿತಪ್ಪಿ ಕೂಡ ಕುಟುಂಬಸ್ಥರು ಅಥವಾ ಬಾಡಿಗಾರ್ಡ್‌ಗಳು ಕಿಮ್‌ನ ಶೌಚಾಲಯ ಬಳಸುವಂತಿಲ್ಲ. ಕಿಮ್ ತನ್ನ ಮಲ ಮೂತ್ರವನ್ನು ಇಷ್ಟು ಗುಟ್ಟಾಗಿಡಲು ಕಾರಣವೇನೆಂದರೆ ಇದು ಶತ್ರು ರಾಷ್ಟ್ರಗಳಿಗೆ ಸಿಕ್ಕರೆ ಅದರ ಮೂಲಕ ತನ್ನ ಆರೋಗ್ಯದ ಕುರಿತ ಹಲವು ಸತ್ಯಗಳು ಬಹಿರಂಗವಾಗಬಹುದು ಎಂಬ ಭಯವಂತೆ.
ರಾಮಭಕ್ತರ ಹತ್ಯೆಯ ರಕ್ತ ಮೆತ್ತಿದ್ದರಿಂದ ಎಸ್.ಪಿ. ಟೋಪಿ ಕೆಂಪಾಗಿದೆ: ಯೋಗಿ ಆದಿತ್ಯನಾಥ್ ವಾಗ್ದಾಳಿ
ಬೇರೆ ಯಾರಾದರೂ ಶೌಚಾಲಯ ಗೌಪ್ಯವಾಗಿ ಬಳಸಿದ್ದರೂ, ಬಳಿಕ ಅದು ಕಿಮ್‌ಗೆ ತಿಳಿದಲ್ಲಿ ಆತ ಕೊಡುವ ಶಿಕ್ಷೆ ಒಂದೇ. ಅದು ಸಾವು ಮಾತ್ರ. ಹಿಂದೆ ಮುಂದೆ ಯೋಚಿಸದೆಯೇ ಶೌಚಾಲಯ ಬಳಸಿದವರನ್ನು ಅಥವಾ ಶೌಚಾಲಯದ ಬಳಿ ಸುಳಿದವರನ್ನು ಕಿಮ್ ಹತ್ಯೆಗೈಯುತ್ತಾನೆ. ಈ ಹಿಂದೆ ಕೂಡ ತನಗೆ ಸರಿ ಕಾಣಿಸದ ಅನೇಕ ಸೇನಾಧಿಕಾರಿಗಳು, ಸಾಮಾನ್ಯ ಜನರನ್ನು ಬರ್ಬರವಾಗಿ ಕೊಲೆ ಮಾಡಿಸಿದ್ದಾನೆ ಕಿಮ್ ಜಾಂಗ್. ಕಡೆಯ ಪಕ್ಷ ತನ್ನ ಸಹೋದರನನ್ನು ಕೂಡ ಬಿಟ್ಟಿಲ್ಲ…!