ಉತ್ತರ ಕೊರಿಯಾದ ಮಾಜಿ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಅವರ 10ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಉತ್ತರ ಕೊರಿಯಾದ ಜನತೆಗೆ 10 ದಿನಗಳ ಕಾಲ ನಗದಂತೆ ನಿರ್ಬಂಧ ಹೇರಲಾಗಿದೆ. ಇಂದು ಕಿಮ್ ಜಾಂಗ್ ಇಲ್ ನಿಧನ ಹೊಂದಿದೆ 10 ವರ್ಷ ಕಳೆದಿದೆ.
ಕಿಮ್ ಜಾಂಗ್ ಇಲ್ 10ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಕೇವಲ ನಗುವುದಕ್ಕೆ ಬ್ಯಾನ್ ಮಾತ್ರವಲ್ಲದೇ ಇನ್ನೂ ಅನೇಕ ನಿರ್ಬಂಧಗಳನ್ನು ನಾಗರಿಕರ ಮೇಲೆ ಹೇರಲಾಗಿದೆ. ಉತ್ತರ ಕೊರಿಯಾ ಜನತೆಗೆ ಮದ್ಯಪಾನ ಮಾಡುವುದು, ನಗುವುದು, ದಿನಸಿ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದು ಹಾಗೂ ವಿರಾಮ ಚಟುವಟಿಕೆಗಳಲ್ಲಿ ತೊಡಗಲು ನಿಷೇಧ ಹೇರಲಾಗಿದೆ ಎಂದು ಗಡಿ ನಗರದ ಸಿನುಜಿಯುದ ನಿವಾಸಿಯೊಬ್ಬರು ಮಾಹಿತಿ ನೀಡಿದ್ರು.
10 ದಿನಗಳ ಶೋಕಾಚರಣೆಯ ಅವಧಿಯಲ್ಲಿ ಯಾರಾದರೂ ಸರ್ಕಾರದ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರು ಗಂಭೀರ ಪರಿಣಾಮಗಳನ್ನು ಎದುರಿಸುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಹಿಂದೆ ಶೋಕಾಚರಣೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಅನೇಕರನ್ನು ಬಂಧಿಸಿ ಕರೆದೊಯ್ಯಲಾಗಿತ್ತು. ಅವರಲ್ಲಿ ಯಾರನ್ನೂ ನಾವು ಮತ್ತೆ ನೋಡಲೇ ಇಲ್ಲ ಎಂದು ಇಲ್ಲಿನ ನಾಗಕರಿಕರು ಹೇಳಿದ್ದಾರೆ. ಶೋಕಾಚರಣೆಯ ಅವಧಿಯಲ್ಲಿ ಅಂತ್ಯಕ್ರಿಯೆ ನಡೆಸಲು ಅಥವಾ ಜನ್ಮ ದಿನ ಆಚರಿಸಲು ಹೀಗೆ ಯಾವುದಕ್ಕೂ ಅನುಮತಿ ನೀಡಲಾಗುವುದಿಲ್ಲ.