ಸಿಯೋಲ್: ಉತ್ತರ ಕೊರಿಯಾ ಇತ್ತೀಚೆಗೆ ನಡೆಸಿದ ಕ್ಷಿಪಣಿ ಪರೀಕ್ಷೆಗಳ ಕುರಿತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ತುರ್ತು ಸಭೆ ನಡೆಸಿದ್ದಕ್ಕಾಗಿ ಉತ್ತರ ಕೊರಿಯಾ ಭಾನುವಾರ ವಾಗ್ದಾಳಿ ನಡೆಸಿದೆ. ಸದಸ್ಯ ರಾಷ್ಟ್ರಗಳು ಟೈಮ್ ಬಾಂಬ್ ನೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದೆ.
ತಂದೆಯ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಲಾಲು ಪುತ್ರ
ಪರಮಾಣು ಅಸ್ತ್ರ ಹೊಂದಿರುವ ಉತ್ತರ ಕೊರಿಯಾ, ಶಬ್ಧಕ್ಕಿಂತ ಐದು ಪಟ್ಟು ವೇಗವಾಗಿ ಚಲಿಸುವ ವಿಮಾನ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಪರೀಕ್ಷೆಯಿಂದಾಗಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಸದಸ್ಯ ರಾಷ್ಟ್ರಗಳು ತುರ್ತು ಸಭೆ ನಡೆಸಿವೆ. ಸಭೆಗೆ ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಫ್ರಾನ್ಸ್ ರಾಷ್ಟ್ರಗಳು ಕರೆ ನೀಡಿದ್ದವು. ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು. ಆದರೆ, ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.
BIG NEWS: ಅದೊಂದು ಅನೈತಿಕ ಸರ್ಕಾರವಾಗಿತ್ತು; ಮೈತ್ರಿ ಸರ್ಕಾರದ ಬಗ್ಗೆ ಕಿಡಿಕಾರಿದ ಆರೋಗ್ಯ ಸಚಿವ; ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ
ಆದರೆ ಇದು ಉತ್ತರ ಕೊರಿಯಾ ಕಣ್ಣು ಕೆಂಪಾಗಿಸಿದೆ. ಅದು ತನ್ನ ಸಾರ್ವಭೌಮತ್ವದ ಮೇಲೆ ಅತಿಕ್ರಮಣ ಮತ್ತು ಗಂಭೀರ ಅಸಹನೀಯ ಪ್ರಚೋದನೆ ಅಂತಾ ಜರೆದಿದೆ. ವಾಷಿಂಗ್ಟನ್‌ನ ಪದೇ ಪದೇ ಮಾತುಕತೆಗಳ ಪ್ರಸ್ತಾಪಗಳನ್ನು ಸಣ್ಣ ಟ್ರಿಕ್ ಎಂದು ನಾಯಕ ಕಿಮ್ ಜಾಂಗ್ ಉನ್ ಖಂಡಿಸಿದ್ದಾರೆ. ಬಿಡೆನ್ ಆಡಳಿತವು ತನ್ನ ಹಿಂದೆ ಇದ್ದ ಅಧ್ಯಕ್ಷರುಗಳಂತೆಯೇ ಪ್ರತಿಕೂಲ ನೀತಿಯನ್ನು ಮುಂದುವರಿಸಿದೆ ಎಂದು ಅವರು ಆರೋಪಿಸಿದ್ದಾರೆ.