ಉತ್ತರ ಕೊರಿಯಾ ಭಾನುವಾರ ತನ್ನ ಪೂರ್ವ ಕರಾವಳಿಯಿಂದ ಅನೇಕ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ, ಇದು ಒಂದು ವಾರದೊಳಗೆ ಅದರ ಎರಡನೇ ಉಡಾವಣೆಯಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು(ಜೆಸಿಎಸ್) ಹೇಳಿದ್ದಾರೆ.
ಕ್ಷಿಪಣಿಗಳನ್ನು ಸುಮಾರು 8 ಗಂಟೆಗೆ(ಶನಿವಾರ 2300 GMT) ಉಡಾಯಿಸಲಾಯಿತು. ದಕ್ಷಿಣ ಕೊರಿಯಾ ಮತ್ತು ಯುಎಸ್ ಗುಪ್ತಚರ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ, ಎಷ್ಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸದೆ JCS ಹೇಳಿದೆ.
ಕಣ್ಗಾವಲು, ಜಾಗರೂಕತೆ ಬಲಪಡಿಸುವಾಗ ನಮ್ಮ ಮಿಲಿಟರಿ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ನಿಕಟವಾಗಿ ಸಹಕರಿಸುತ್ತಿದೆ. ಉತ್ತರ ಕೊರಿಯಾದಿಂದ ಹೆಚ್ಚುವರಿ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.
ಉತ್ತರ ಕೊರಿಯಾ “ಪುಲ್ವಾಸಲ್ -3-31” ಎಂಬ ಹೊಸ ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಯನ್ನು ಉಡಾಯಿಸಿದ ಕೆಲವು ದಿನಗಳ ನಂತರ ಇದು ನಡೆದಿದೆ. ಇದು ಪರಮಾಣು ಸಾಮರ್ಥ್ಯವನ್ನು ಸೂಚಿಸುತ್ತದೆ.
ಉತ್ತರ ಕೊರಿಯಾವು ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗೆ ಮುಖಾಮುಖಿಯಾಗುತ್ತಿದೆ, ಕಿಮ್ ಜಾಂಗ್ ಉನ್ ಅವರ ಸರ್ಕಾರವು ಪ್ರಚೋದನಕಾರಿ ಕ್ರಮಗಳನ್ನು ಮುಂದುವರೆಸುವ ಅಥವಾ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅದು ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಿದ ನಂತರ ರಷ್ಯಾದೊಂದಿಗೆ ಸಹಕಾರ ಬಲಪಡಿಸಿಕೊಂಡಿದೆ. ದಕ್ಷಿಣ ಕೊರಿಯಾದೊಂದಿಗೆ ಶಾಂತಿಯುತವಾಗಿ ಮತ್ತೆ ಸೇರುವ ತನ್ನ ದಶಕಗಳ ಗುರಿಯನ್ನು ರದ್ದುಗೊಳಿಸಿದೆ.
ಉತ್ತರ ಕೊರಿಯಾ ಸೆಪ್ಟೆಂಬರ್ 2021 ರಲ್ಲಿ ಸಂಭಾವ್ಯ ಪರಮಾಣು ದಾಳಿಯ ಸಾಮರ್ಥ್ಯದೊಂದಿಗೆ ಕ್ರೂಸ್ ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ನಡೆಸಿತು.