ತುಮಕೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ಕಸರತ್ತು ನಡೆಸಿದ್ದಾರೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂಬುದು ಬಿಜೆಪಿ ನಾಯಕರ ಹಾಗೂ ಬೆಂಬಲಿಗರ ಲೆಕ್ಕಾಚಾರ. ಆದರೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗುರೂಜಿಯೊಬ್ಬರು ಈ ಬಾರಿ ದೇಶಕ್ಕೆ ಮಹಿಳೆಯೊಬ್ಬರು ಪ್ರಧಾನಿ ಆಗಲಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ನೊಣವಿನಕೆರೆಯ ಯಶ್ವಂತ ಗುರೂಜಿ, ಈ ಬಾರಿ ಮಹಿಳಾ ಪ್ರಧಾನಿ ದೇಶಕ್ಕೆ ಸಿಗಲಿದ್ದಾರೆ ಎಂದು ಹೇಳಿದ್ದಾರೆ. ಈ ಬಾರಿ ಕಾಂಗ್ರೆಸ್ ದೇಶದ ಚುಕ್ಕಾಣಿ ಹಿಡಿಯಲಿದೆ. ಪ್ರಿಯಾಂಕಾ ಗಾಂಧಿ ದೇಶದ ಗದ್ದುಗೆ ಏರಲಿದ್ದಾರೆ ಎಂದು ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಯಶ್ವಂತ್ ಗುರೂಜಿ ರಾಜ್ಯದಲ್ಲಿ ಕಾಂಗ್ರೆಸ್ 135 ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು. ಅಲ್ಲದೇ ಕೋವಿಡ್ ಬಗ್ಗೆ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಯಶ್ವಂತ ಗುರೂಜಿ ನುಡಿದಿದ್ದ ಈ ಎಲ್ಲಾ ಭವಿಷ್ಯಗಳು ನಿಜವಾಗಿವೆ. ಇದೀಗ ದೇಶಕ್ಕೆ ಈ ಬಾರಿ ಮಹಿಳಾ ಪ್ರಧಾನಿ ಆಗಲಿದ್ದಾರೆ ಎಂದು ಹೇಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ.
ಈ ಬಾರಿ ಸ್ತ್ರೀ ಒಬ್ಬಳು ಪುರುಷನ ಎದುರು ದುರ್ಗಿಯಾಗಿ ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನು ಮಾಡುವಳು. ತಾಯಿ ಮಮತೆಯಿಂದ ತನ್ನ ಅಧಿಕಾರವನ್ನು ಪರರಿಗೆ ಬಿಟ್ಟುಕೊಡುವಳು ಎಂದು ಕಾಲಜ್ಞಾನದಲ್ಲಿ ಉಲ್ಲೇಖವಾದ ಚುನವಣಾ ಭವಿಷ್ಯವನ್ನು ಯಶ್ವಂತ್ ಗುರೂಜಿ ನುಡಿದಿದ್ದಾರೆ.
ಶಿವರಾತ್ರಿಗೂ ಮುನ್ನ ಚುನಾವಣೆಯಾಗಿದ್ದರೆ ಮೋದಿಯವರಿಗೆ ಮತ್ತೆ ಪ್ರಧಾನಿಯಾಗುವ ಯೋಗವಿತ್ತು. ಆದರೆ ಈಗ ಆ ಯೋಗ ಇಲ್ಲ. ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಲಿದ್ದಾರೆ. ಸಧ್ಯ ಪ್ರಿಯಾಂಕಾ ಗಾಂಧಿಗೆ ಹಂಸಕ, ಚಂದ್ರಮಂಗಳ,ಬುಧಾಧಿತ್ಯಯೋಗ ಆರಂಭವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗುವ ಅವಕಾಶ ಬರಲಿದೆ ಎಂದು ಹೇಳಿದ್ದಾರೆ. ಬೇರೆ ಪಕ್ಷಗಳ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.