ಮಂಡ್ಯದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದೆ. ಮೊಟ್ಟೆ, ಚಿಕನ್ ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ವಿತರಿಸಲಾಗಿದೆ.
ಸಾರ್ವಜನಿಕರಿಗೆ ಬಾಡೂಟ ವಿತರಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲು ಯತ್ನಿಸಲಾಗಿದೆ. ಸಮ್ಮೇಳನದ ಸ್ಥಳದಲ್ಲಿ ಬಾಡೂಟ ವಿತರಿಸುವಾಗ ಪ್ರಗತಿಪರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಕೊನೆಗೂ ಪೊಲೀಸ್ ಸಿಬ್ಬಂದಿ ಮಾಂಸಾಹಾರವನ್ನು ವಶಪಡಿಸಿಕೊಂಡಿದ್ದಾರೆ.