ಬೆಂಗಳೂರು: ವಿಧಾನಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ.
ಅಧಿಸೂಚನೆ ಹೊರಡಿಸಿದ ನಂತರ ಈವರೆಗೆ 49 ಅಭ್ಯರ್ಥಿಗಳಿಂದ 71 ನಾಮಪತ್ರಗಳು ಸಲ್ಲಿಕೆಯಾಗಿವೆ. ಬುಧವಾರ ಒಂದೇ ದಿನ 21 ಅಭ್ಯರ್ಥಿಗಳು 29 ನಾಮಪತ್ರ ಸಲ್ಲಿಸಿದ್ದಾರೆ. 29 ನಾಮಪತ್ರಗಳ ಪೈಕಿ ಬಿಜೆಪಿ 1, ಪಕ್ಷೇತರರು 20 ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೆ ಸಲ್ಲಿಸಲಾದ ನಾಮಪತ್ರಗಳಲ್ಲಿ ಕಾಂಗ್ರೆಸ್ 5. ಬಿಜೆಪಿ 4. ಜೆಡಿಎಸ್ 1. ಪಕ್ಷೇತರರು 40 ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮೇ 15ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 3ರಂದು ಮತದಾನ ನಡೆಯಲಿದೆ.