ನೋಕಿಯಾ ಫೋನ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಮಾರುಕಟ್ಟೆಗೆ ದಿನಕ್ಕೊಂದು ಫೀಚರ್ ಫೋನ್, ಸ್ಮಾರ್ಟ್ ಫೋನ್ ಗಳು ಲಗ್ಗೆಯಿಡ್ತಿವೆ.
ಇದ್ರಲ್ಲಿ ನೋಕಿಯಾ ಕೂಡ ಹಿಂದೆ ಬಿದ್ದಿಲ್ಲ. ನೋಕಿಯಾ ಶೀಘ್ರದಲ್ಲೇ ಫ್ಲಿಪ್ ಫೋನ್ ಬಿಡುಗಡೆ ಮಾಡಲಿದೆ. ನೋಕಿಯಾ ಫ್ಲಿಪ್ ಫೋನ್, ನೋಕಿಯಾ 2760 ಫ್ಲಿಪ್ 4G ಮಾನಿಟರ್‌ನೊಂದಿಗೆ ಪ್ರಾರಂಭಿಸುವ ಸಾಧ್ಯತೆಯಿದೆ. ಇದು ಕೈಯೋಸ್ ನಲ್ಲಿ ನಡೆಯಲಿದೆ ಎನ್ನಲಾಗ್ತಿದೆ.
ನೋಕಿಯಾ 2760 ಫ್ಲಿಪ್ 4ಜಿ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ. ಈ ಫೋನ್ 4.33 x 2.28 x 0.76 ಇಂಚಿನಲ್ಲಿ ಬರಲಿದೆ. ಫ್ಲಿಪ್ ಫೋನ್‌ನ ಪರದೆ 40 x 320 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲಿಸಲಿದೆ.
1,450ಎಂಎಎಚ್ ಬ್ಯಾಟರಿಯನ್ನು ಇದಕ್ಕೆ ನೀಡಲಾಗುವುದು. ಫುಲ್ ಚಾರ್ಜ್ ಮಾಡಿದ್ರೆ ಇದು 6.8 ಗಂಟೆಗಳ ಟಾಕ್ ಟೈಮ್ ನೀಡಲಿದೆ. ಇದಕ್ಕೆ ಐದು ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ನೀಡಲಾಗಿದೆ.
4ಜಿ,ವೈ-ಫೈ, ಬ್ಲೂಟೂತ್, ಜಿಪಿಎಸ್, ಮಲ್ಟಿಮೀಡಿಯಾ ಮೆಸೇಜಿಂಗ್, ಹ್ಯಾಂಡ್ಸ್-ಫ್ರೀ ಸ್ಪೀಕರ್, ಕಲರ್ ಡಿಸ್ಪ್ಲೇ, ಎಂಪಿ3ಪ್ಲೇಯರ್ ಇದಕ್ಕೆ ಸಿಗಲಿದೆ. ಕೈಯೋಸ್ ನೊಂದಿಗೆ ಬರುವ ಕಂಪನಿಯ ಆರನೇ ಫೋನ್ ಇದಾಗಿದೆ. ಕಂಪನಿ ಇದ್ರ ಬೆಲೆ ಬಹಿರಂಗಪಡಿಸಿಲ್ಲ.